-->
ವಿವಾಹ ಪ್ರಮಾಣ ಪತ್ರ ಇದ್ದ ಮಾತ್ರಕ್ಕೆ ಮದುವೆಯಾಗಿದೆ ಎಂದರ್ಥವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಾಹ ಪ್ರಮಾಣ ಪತ್ರ ಇದ್ದ ಮಾತ್ರಕ್ಕೆ ಮದುವೆಯಾಗಿದೆ ಎಂದರ್ಥವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಾಹ ಪ್ರಮಾಣ ಪತ್ರ ಇದ್ದ ಮಾತ್ರಕ್ಕೆ ಮದುವೆಯಾಗಿದೆ ಎಂದರ್ಥವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಶಾಸ್ತ್ರ ಪ್ರಕಾರ ಮದುವೆಯಾಗದೇ ಇದ್ದರೆ ಅದು ಮದುವೆಯೇ ಅಲ್ಲ. ವಿವಾಹ ಪ್ರಮಾಣ ಪತ್ರ ಇದ್ದ ಮಾತ್ರಕ್ಕೆ ಮದುವೆಯಾಗಿದೆ ಎಂದರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ಮಾನ್ಯ ನ್ಯಾ. ಬಿ. ವಿ. ನಾಗರತ್ನ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.


ಹಿಂದೂ ವಿವಾಹ ಎಂದರೆ ಅದಕ್ಕೆ ಪವಿತ್ರವಾದ ಸ್ಥಾನವಿದೆ. ಅದು ಹಾಡು, ನೃತ್ಯ ಮತ್ತು ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೂರೈಸದೇ ಇದ್ದರೆ, ಆಗ ಅಂತಹ ಮದುವೆಯನ್ನು ಕಾನೂನಿನ ಮಾನ್ಯತೆಗೊಳಪಡಿಸಲಾಗದು ಎಂದು ನ್ಯಾಯಪೀಠ ತೀರ್ಪು ನೀಡಿತು.


ಯಾವುದೇ ಮದುವೆಯನ್ನು ನೋಂದಣಿ ಮಾಡಿದ ತಕ್ಷಣ ಅದೇ ಅಂತಿಮವಾಗುವುದಿಲ್ಲ. ಯಾವುದೇ ಶಾಸ್ತ್ರೋಕ್ತವಾದ ಆಚರಣೆ ಇಲ್ಲದೆ, ಕೇವಲ ಸಂಸ್ಥೆಯೊಂದು ನೋಂದಣಿಯ ದಾಖಲೆ ಪತ್ರ ವಿತರಿಸಿದ ಮಾತ್ರಕ್ಕೆ ಅದು ವೈವಾಹಿಕ ಜೀವನದ ಯಾವುದೇ ಸ್ಥಿತಿಯನ್ನು ಖಚಿತಪಡಿಸುವುದಿಲ್ಲ ಮತ್ತು ಹಿಂದೂ ವಿವಾಹ ಕಾಯ್ದೆಯ ಅನ್ವಯ ಯಾವುದೇ ವಿವಾಹವನ್ನು ಮಾನ್ಯಗೊಳಿಸುವುದೂ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.




Ads on article

Advertise in articles 1

advertising articles 2

Advertise under the article