ಪೊಲೀಸ್ ಅಧಿಕಾರಿ ಖಾತೆಯೇ ಹ್ಯಾಕ್: 15 ಲಕ್ಷ ರೂ. ಎಗರಿಸಿದ ಸೈಬರ್ ಕಳ್ಳರು!
ಪೊಲೀಸ್ ಅಧಿಕಾರಿ ಖಾತೆಯೇ ಹ್ಯಾಕ್: 15 ಲಕ್ಷ ರೂ. ಎಗರಿಸಿದ ಸೈಬರ್ ಕಳ್ಳರು!
ಸೈಬರ್ ಕಳ್ಳರಿಗೆ ಪೊಲೀಸರ ಭಯವೂ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಸೈಬರ್ ಕಳ್ಳರು ಬ್ಯಾಂಕ್ ಅಕೌಂಟ್‌ನಿಂದ 15 ಲಕ್ಷ ರೂ. ಎಗರಿಸಿದ್ದಾರೆ.
ಹಾಸನ ಉಪ ವಿಭಾಗದ ಡಿವೈಎಸ್‌ಪಿ ಪಿ.ಕೆ. ಮುರಳೀಧರ್ ಅವರು ವಂಚನೆಗೊಳಗಾದ ಪೊಲೀಸ್ ಅಧಿಕಾರಿ. ಅವರ ಖಾತೆಯಿಮದ 15,98,761 ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಖದೀಮರು ವಂಚನೆ ಮಾಡಿದ್ಧಾರೆ. ಈ ಬಗ್ಗೆ ಸಂತ್ರಸ್ತ ಪೊಲೀಸ್ ಅಧಿಕಾರಿ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮಡಿಕೇರಿ ಕೆನರಾ ಬ್ಯಾಂಕ್ ಶಾಖೆ ಮತ್ತು ಭಾಗಮಂಡಲದ ಕೆನರಾ ಬ್ಯಾಂಕ್‌ಗಳಲ್ಲಿ ಮುರಳೀಧರ್ ಅವರು ಖಾತೆ ಹೊಂದಿದ್ದರು.
ಮೇ 20ರಂದು ಮಧ್ಯಾಹ್ನ 1-30ರ ವೇಳೆಗೆ ಡಿವೈಎಸ್‌ಪಿ ಅವರ ಮಬೈಲ್ ಸಂಖ್ಯೆಗೆ ಖಾಲಿ ಮೆಸ್ಸೇಜ್‌ಗಳು ಬಂದಿದ್ದವು. ಇದಾದ ನಂತರ ತಮ್ಮ ಗಮನಕ್ಕೆ ಬಾರದೇ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.
ಮಡಿಕೇರಿ ಅಕೌಂಟಿನಿಂದ 12.10 ಲಕ್ಷ ರೂ. ಹಾಗೂ ಭಾಗಮಂಡಲ ಅಕೌಂಟಿನಿಂದ 3.88 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ.