Apk link ಕ್ಲಿಕ್ ಮಾಡಿದ್ರೆ ಕ್ಷಣಾರ್ಧದಲ್ಲೇ ಬ್ಯಾಂಕ್ ಅಕೌಂಟ್ ಖಾಲಿ!?: ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ತಕ್ಷಣ ಏನು ಮಾಡಬೇಕು...?
Apk link ಕ್ಲಿಕ್ ಮಾಡಿದ್ರೆ ಕ್ಷಣಾರ್ಧದಲ್ಲೇ ಬ್ಯಾಂಕ್ ಅಕೌಂಟ್ ಖಾಲಿ!?: ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ತಕ್ಷಣ ಏನು ಮಾಡಬೇಕು...?
ಬ್ಯಾಂಕ್ ಹೆಸರಲ್ಲೋ, ಲೋನ್ ಅಗತ್ಯವಿದೆಯೋ ಎಂದು ಕೇಳಿ ನಿಮ್ಮನ್ನು ಫೋನ್ ಮೂಲಕ ಹ್ಯಾಕರ್‌ಗಳು ಸಂಪರ್ಕಿಸಬಹುದು... ಇಲ್ಲವೇ ಭರ್ಜರಿ ಗಿಫ್ಟ್ ಬಂದಿದೆ ಎಂದು ಒಂದು ಲಿಂಕ್ ಕಳಿಸಿ ನಿಮ್ಮನ್ನು ಮೋಸ ಮಾಡಬಹುದು.
ಒಂದು ಎಪಿಕೆ Extension ಇರುವ ಲಿಂಕ್ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಎಚ್ಚರ ತಪ್ಪಿಯೋ, ಕುತೂಹಲಕ್ಕೋ ಆ ಲಿಂಕ್ ಕ್ಲಿಕ್ ಮಾಡಿದರೆ ದೂರದಲ್ಲಿ ಕಾದು ಕುಳಿತಿರುವ ಹ್ಯಾಕರ್‌ಗಳು ನಿಮ್ಮ ಫೋನ್‌ನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಾರೆ.
ಸೈಬರ್ ವಂಚಕರು ನಿಮ್ಮ ಫೋನ್‌ನೊಳಕ್ಕೆ ನುಗ್ಗಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿ ಇರುವ ಅಷ್ಟೂ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ತಕ್ಷಣ ಅದು ನಿಮ್ಮ ಅರಿವಿಗೆ ಬಂದರೂ ನಿಮಗೆ ಏನೂ ಮಾಡಲಾಗದು. ಇಂತಹ ಸಂದರ್ಭದಲ್ಲಿ ನೀವು ಏನು ಮಾಡಬೇಕು..? ಇಲ್ಲಿದೆ ಒಂದು ಮಹತ್ವದ ಟಿಪ್ಸ್...
ನಿಮ್ಮ ಮೊಬೈಲ್‌ಗೆ ಒಂದು ಲಿಂಕ್ ಬರುತ್ತದೆ.
ಸೈಬರ್ ವಂಚಕರು ನಿಮ್ಮ ಮೊಬೈಲ್ ಹ್ಯಾಕ್ ಮಾಡಲು RAT ಸಿಸ್ಟಮ್ ಬಳಸುತ್ತಾರೆ. RAT ಅಂದರೆ ರಿಮೋಟ್ ಆಕ್ಸಿಸ್ ಟೂಲ್ಸ್ ತಂತ್ರಜ್ಙಾನ. ಆಂಡ್ರಾಯ್ಡ್ App ಸಿದ್ದಪಡಿಸಿ ವಾಟ್ಸಯಾಪ್ ಮೂಲಕ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ APK ಫೈಲ್ ಕಳುಹಿಸಿಕೊಡುತ್ತಾರೆ.
ಇದನ್ನು ಯಾರಾದರೂ ಓಪನ್ ಮಾಡಿದರೆ, ಆ ಕೂಡಲೇ ಅವರ ಮೊಬೈಲ್ ಅವರ ನಿಯಂತ್ರಣಕ್ಕೆ ಬರುತ್ತದೆ.
ಒಂದು ವೇಳೆ ಅಚಾನಕ್ ಆಗಿ ವಂಚಕರು ಕಳುಹಿಸಿ ಎಪಿಕೆ ಫೈಲ್ ಕ್ಲಿಕ್ ಮಾಡಿದರೆ ತಕ್ಷಣ ನೀವು ನಿಮ್ಮ ಮೊಬೈಲ್‌ನ್ನು ಏರೋಪ್ಲೇನ್ ಮೋಡ್‌ಗೆ ಹಾಕಿಬಿಡಬೇಕು.. ಇಲ್ಲವೇ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಇದಾದ ಕೂಡಲೇ ನಿಮ್ಮ ಬ್ಯಾಂಕ್‌ನ್ನು ಸಂಪರ್ಕಿಸಿ ಬ್ಯಾಂಕ್ ಖಾತೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸುವಂತೆ ಮನವಿ ಮಾಡಬೇಕು.
ಹೀಗೆ ಮಾಡಿದ್ದಲ್ಲಿ ಮಾತ್ರ ನಿಮ್ಮ ಬ್ಯಾಂಕ್ ಖಾತೆ ಸದ್ಯದ ಮಟ್ಟಿಗೆ ಸೇಫ್ ಆಗಲಿದೆ. ಮತ್ತು ನಿಮ್ಮ ಖಾತೆಯಲ್ಲಿ ಇರುವ ಹಣವನ್ನೂ ನೀವು ಹ್ಯಾಕರ್‌ಗಳ ಪಾಲಾಗದಂತೆ ಕಾಪಾಡಿಕೊಳ್ಳಬಹುದು..