"ಸ್ವತಂತ್ರ-ಪಾರದರ್ಶಕ ಲೋಕಾಯುಕ್ತ" ಪ್ರತಿಪಾದಕ ನಿ.ನ್ಯಾ. ಬಿ. ವೀರಪ್ಪ ಉಪ ಲೋಕಾಯುಕ್ತರಾಗಿ ನೇಮಕ
"ಸ್ವತಂತ್ರ-ಪಾರದರ್ಶಕ ಲೋಕಾಯುಕ್ತ" ಪ್ರತಿಪಾದಕ ನಿ.ನ್ಯಾ. ಬಿ. ವೀರಪ್ಪ ಉಪ ಲೋಕಾಯುಕ್ತರಾಗಿ ನೇಮಕ
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರನ್ನು ಎರಡನೇ ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಉನ್ನತಾಧಿಕಾರಿದ ಸಮಿತಿ ಈ ನೇಮಕವನ್ನು ಮಾಡಿದ್ದು, ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ.
ಸಿಎಂ ಸಿದ್ದರಾಮಯ್ಯ, ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿದ್ದ ಸಮಿತಿ ಈ ನೇಮಕ ಮಾಡಿದೆ.
ಉಪ ಲೋಕಾಯುಕ್ತರಾಗಿದ್ದ ಬಿ.ಎಸ್. ಪಾಟೀಲ್ ಲೋಕಾಯುಕ್ತ ಹುದ್ದೆಗೆ ಬಡ್ತಿ ನೀಡಲಾಗಿದೆ. ಎರಡು ಲೋಕಾಯುಕ್ತ ಹುದ್ದೆಗಳ ಪೈಕಿ ಒಂದರಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದಾರೆ. .ಖಾಲಿ ಇರುವ ಎರಡನೇ ಉಪ ಲೋಕಾಯುಕ್ತ ಹುದ್ದೆಗೆ ಈ ನೇಮಕ ಮಾಡಲಾಗಿದೆ.
ಸ್ವಾತಂತ್ಯ ಬಂದು 75 ವರ್ಷಗಳಾಗಿದ್ದರೂ ಲೋಕಾಯುಕ್ತದಂತಹ ಸ್ವತಂತ್ರ ಸಂಸ್ಥೆಯು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಕೆಲಸ ಮಾಡಲು ಅನುಮತಿಸುವ ಮತ್ತು ಬೆಂಬಲಿಸುವ ಇಚ್ಚೆ ಯಾವುದೇ ರಾಜಕೀಯಪಕ್ಷಕ್ಕೆ ಇಲ್ಲ ಎಂದು ಆಗಿನ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇದ್ದ ನ್ಯಾ. ವೀರಪ್ಪ ಕಿಡಿಕಾರಿದ್ದರು.
ಇಂದು ಅದೇ ನ್ಯಾಯಮೂರ್ತಿಯವರು ಲೋಕಾಯುಕ್ತ ಸಂಸ್ಥೆಯನ್ನು ಪ್ರವೇಶಿಸುತ್ತಿದ್ದಾರೆ. ಅವರ ಪ್ರವೇಶದೊಂದಿಗೆ ಲೋಕಾಯುಕ್ತದ ಎಲ್ಲ ಹುದ್ದೆಗಳೂ ಭರ್ತಿಯಾದಂತಾಗಿದೆ.