-->
ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ: ಸಂಸದರ ಶಿಫಾರಸು ತಂದಿದ್ದ ನೌಕರನ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಹೈಕೋರ್ಟ್‌

ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ: ಸಂಸದರ ಶಿಫಾರಸು ತಂದಿದ್ದ ನೌಕರನ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಹೈಕೋರ್ಟ್‌

ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ: ಸಂಸದರ ಶಿಫಾರಸು ತಂದಿದ್ದ ನೌಕರನ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಹೈಕೋರ್ಟ್‌





ವರ್ಗಾವಣೆ ತಡೆಗೆ ಸಂಸದರೊಬ್ಬರ ಶಿಫಾರಸು ತಂದಿದ್ದ ಸರ್ಕಾರಿ ನೌಕರನನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿದ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿಹಿಡಿದಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.


ಸೇವಾ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಅನಗತ್ಯವಾಗಿದ್ದು, ಅಪ್ರಸ್ತುತ ವಿಷಯಗಳಿಗೆ ಎಡೆ ಮಾಡಿಕೊಡುತ್ತದೆ. ಇಂತಹ ವಿಚಾರಗಳು ಸಾರ್ವಜನಿಕ ಆಡಳಿತ ಮತ್ತು ಉದ್ಯೋಗದಾತರ ಹಿತಾಸಕ್ತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.



ವರ್ಗಾವಣೆಯಾದರೂ ವರದಿ ಮಾಡಿಕೊಳ್ಳದೆ ನ್ಯಾಯಾಲಯದ ಮೆಟ್ಟಿಲೇರಿದ್ದ ಕಿರಿಯ ಸಹಾಯಕಿಯಾಗಿದ್ದ ಎಂ. ವೀಣಾ ಅವರನ್ನು ಅವರನ್ನು ಸರ್ಕಾರ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.


ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಏಕ ಸದಸ್ಯ ನ್ಯಾಯಪೀಠ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆಹಾರ ಮತ್ತು ನಾಗರಿಕ ಸರಬರಾಜು ಮಂಡಳಿ ವಿಭಾಗೀಯ ನ್ಯಾಯಪೀಠದ ಮೆಟ್ಟಿಲೇರಿತ್ತು.


ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳು ಉದ್ಯೋಗದಾತ ಸಕ್ಷಮ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ ಬೀರುತ್ತಿರುವುದು ಗಮನಕ್ಕೆ ಬಂದಿದೆ. ರಾಜಕೀಯ ಪ್ರಭಾವ ಉಂಟುಮಾಡುವ ಅಧಿಕಾರಿಗಳು ಯಾ ನೌಕರರ ಸಾರ್ವಜನಿಕರ ಸೇವೆ ಮೌಲ್ಯಯುತವಾಗಿರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.



Ads on article

Advertise in articles 1

advertising articles 2

Advertise under the article