-->
ಚೆಕ್ ಅಮಾನ್ಯ ಪ್ರಕರಣ: ಇತರ ಹೊಣೆಗಾರಿಕೆಗೂ ಕೇಸ್ ದಾಖಲಿಸಬಹುದು- ಕರ್ನಾಟಕ ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ಇತರ ಹೊಣೆಗಾರಿಕೆಗೂ ಕೇಸ್ ದಾಖಲಿಸಬಹುದು- ಕರ್ನಾಟಕ ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: ಇತರ ಹೊಣೆಗಾರಿಕೆಗೂ ಕೇಸ್ ದಾಖಲಿಸಬಹುದು- ಕರ್ನಾಟಕ ಹೈಕೋರ್ಟ್‌





ಚೆಕ್‌ ಅಮಾನ್ಯ ಪ್ರಕರಣವು ಕೇವಲ ಸಾಲ ಮರುಪಾವತಿಗೆ ನೀಡಿದ ಚೆಕ್‌ಗೆ ಮಾತ್ರವಲ್ಲ, ಇತರ ಹೊಣೆಗಾರಿಕೆಗೂ ದಾಖಲಿಸಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಕುಮಾರ್‌'ಸ್ ಎಕ್ಸ್‌ಪೋರ್ಟ್‌ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಚೆಕ್‌ ಅಮಾನ್ಯ ಪ್ರಕರಣಗಳು ಕೇವಲ ಸಾಲ ಮರುಪಾವತಿಗೆ ಸೀಮಿತವಲ್ಲ. ಇತರ ಹೊಣೆಗಾರಿಕೆಗೂ ಚೆಕ್ ಅಮಾನ್ಯ ಪ್ರಕರಣ ಸಂಬಂಧಿಸಿದೆ ಎಂದು ವಿಶಾಲಾರ್ಥದಲ್ಲಿ ಹೇಳಿದೆ.


ಮೇಲ್ಮನವಿದಾರರು ಮತ್ತು ಎದುರುದಾರರ ಪತಿ ಉದ್ಯಮದಲ್ಲಿ ಪಾಲುದಾರರಿದ್ದು, ವಿದೇಶದಲ್ಲಿ ಸಾಕಷ್ಟು ವರ್ಷ ದುಡಿದ ನಂತರ ಹಿಂತಿರುಗಿದ್ದ ಮೇಲ್ಮನವಿದಾರರು ಎದುರುದಾರರ ಪತಿಯ ಉದ್ಯಮದಲ್ಲಿ ಬಂಡವಾಳ ಹೂಡಿದ್ದರು. ಆದರೆ, ಪಾಲುದಾರರನ್ನಾಗಿ ಮಾಡದೆ, ಹಣವನ್ನೂ ಹಿಂತಿರುಗಿಸದೆ ಇದ್ದಾಗ, ಹಣ ಮರುಪಾವತಿಗೆ ಸಹಿ ಇರುವ ಖಾಲಿ 6 ಚೆಕ್‌ಗಳನ್ನು ನೀಡಿದ್ದರು. ಅದರ ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಕಿದಾಗ ನಿಧಿ ಕೊರತೆ ಎಂಬ ಕಾರಣಕ್ಕೆ ಚೆಕ್ ಅಮಾನ್ಯಗೊಂಡಿತ್ತು.


ಎದುರುದಾರರ ಪತಿಯು ಅಕ್ರಮವಾಗಿ ಚೆಕ್‌ಗಳನ್ನು ಸಂಗ್ರಹಿಸಿ ಮೇಲ್ಮನವಿದಾರರಿಗೆ ನೀಡಿದ್ದರು. ಅದನ್ನು ಮೇಲ್ಮನವಿದಾರರು ದುರುಪಯೋಗಪಡಿಸಿ ಚೆಕ್ ಅಮಾನ್ಯ ಪ್ರಕರಣವನ್ನು ದಾಖಲಿಸಿದ್ದರು ಎಂಬುದು ಎದುರುದಾರರ ವಾದವಾಗಿತ್ತು.


ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಆದರೆ, ವಿಚಾರಣಾ ನ್ಯಾಯಾಲಯದ ತೀರ್ಪು ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಮೇಲ್ಮನವಿಯನ್ನು ಪುರಸ್ಕರಿಸಿ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ.


Section 138 of Negotiable Instruments Act not only includes the cheques issued towards the discharge of any debt. but other liability also.- Karnataka High Court (Justice K.S. Mudagal)


ಪ್ರಕರಣ: ಅಶ್ಫಕ್ ರಶೀದ್ ಶೇಕ್ Vs ಮೀನಾ ಉಲ್ಲಾಸ್‌ 

ಕರ್ನಾಟಕ ಹೈಕೋರ್ಟ್, Crl.A. 1471/2018 Dated 27-01-2022

Ads on article

Advertise in articles 1

advertising articles 2

Advertise under the article