ಹೊಸ ಕಾನೂನು ತಿದ್ದುಪಡಿಗೆ ಸಮಿತಿ; ಆದರೆ, ಪ್ರತಿಭಟನೆ ಬೇಡ: ವಕೀಲರಿಗೆ ಬಿಸಿಐ ಮನವಿ
Thursday, June 27, 2024
ಹೊಸ ಕಾನೂನು ವಿರುದ್ಧ ಪ್ರತಿಭಟನೆ ಮಾಡಬೇಡಿ: ವಕೀಲರಿಗೆ ಮನವಿ
ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಜಾರಿಗೆ ಬರುತ್ತಿರುವ ಮೂರು ಹೊಸ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸದಂತೆ ದೇಶದ ವಕೀಲರಿಗೆ ಭಾರತೀಯ ವಕೀಲರ ಮಂಡಳಿ(ಬಿಸಿಐ) ಮನವಿ ಮಾಡಿದೆ.
ಹೊಸ ಕಾನೂನುಗಳಿಗೆ ಅಗತ್ಯ ತಿದ್ದುಪಡಿ ಶಿಫಾರಸು ಮಾಡುವುದಕ್ಕೆ ಹಿರಿಯ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರನ್ನು ಒಳಗೊಂಡ ಸಮಿತಿ ರಚನೆಯಾಗಲಿದೆ. ಈ ಸಮಿತಿಯಲ್ಲಿ ಅಗತ್ಯ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಹೆಳಿದೆ.
ಹೊಸ ಕಾನೂನನ್ನು ತಕ್ಷಣ ಅಮಾನತಿನಲ್ಲಿಡಬೇಕು. ಈ ಮೂರು ಕಾಯ್ದೆಗಳನ್ನು ಸಂಸತ್ತಿನ ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು. ಮತ್ತು ದೇಶವ್ಯಾಪಿ ಸಮಗ್ರ ಚರ್ಚೆ ನಡೆಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ವಿವಿಧ ವಕೀಲರ ಸಂಘಗಳು ಹೇಳಿವೆ.