-->
ಒಂದೇ ದಿನದಲ್ಲಿ 600 ಅರ್ಜಿಗಳ ವಿಚಾರಣೆ: ನ್ಯಾ. ನಾಗಪ್ರಸನ್ನ ಮತ್ತೆ ದಾಖಲೆ!

ಒಂದೇ ದಿನದಲ್ಲಿ 600 ಅರ್ಜಿಗಳ ವಿಚಾರಣೆ: ನ್ಯಾ. ನಾಗಪ್ರಸನ್ನ ಮತ್ತೆ ದಾಖಲೆ!

ಒಂದೇ ದಿನದಲ್ಲಿ 600 ಅರ್ಜಿಗಳ ವಿಚಾರಣೆ: ನ್ಯಾ. ನಾಗಪ್ರಸನ್ನ ಮತ್ತೆ ದಾಖಲೆ!





ಹಲವು ಮಹತ್ವದ ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾ. ನಾಗಪ್ರಸನ್ನ ಮತ್ತೆ 600 ಅರ್ಜಿಗಳನ್ನು ಒಂದೇ ದಿನದಲ್ಲಿ ವಿಚಾರಣೆ ನಡೆಸಲಿದ್ದಾರೆ.


ಎರಡು ತಿಂಗಳ ಹಿಂದಷ್ಟೇ 608 ಅರ್ಜಿಗಳ ವಿಚಾರಣೆ ನಡೆಸುವ ಮೂಲಕ ನ್ಯಾಯಮೂರ್ತಿ ನಾಗಪ್ರಸನ್ನ ಹೊಸ ದಾಖಲೆ ಬರೆದಿದ್ದರು.


ಅರ್ಜಿಗಳ ವಿಚಾರಣೆ ಮತ್ತು ಇತ್ಯರ್ಥದ ಅವಧಿಯ ವಿಚಾರದಲ್ಲಿ ನ್ಯಾ. ನಾಗಪ್ರಸನ್ನ ಅವರು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ.


19ನೇ ಕೋರ್ಟ್ ಹಾಲ್‌ ಪೀಠದಲ್ಲಿ ಇರುವ ನ್ಯಾ. ನಾಗಪ್ರಸನ್ನ ಅವರು ಸಿಆರ್‌ಪಿಸಿಯ ಸೆಕ್ಷನ್ 482ರ ಅಡಿಯಲ್ಲಿ ಅಂದರೆ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ತಡೆಗಟ್ಟಲು ಅಥವಾ ರಕ್ಷಣೆ ಪಡೆಯಲು ಅಗತ್ಯವಿರುವ ಆದೇಶಗಳನ್ನು ಮಾಡುವ ಸಂಬಂಧ ಸಲ್ಲಿಸಲಾಗಿರುವ ಕ್ರಿಮಿನಲ್ ಅರ್ಜಿಗಳು ಮತ್ತು ಸಾಮಾನ್ಯವಾದ ವಿವಿಧ ಉಳಿಕೆ ವಿಷಯಗಳ ಸಂಬಂಧ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.


2019ರ ನವೆಂಬರ್‌ 26ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾ. ನಾಗಪ್ರಸನ್ನ 2021ರ ಸೆಪ್ಟಂಬರ್ 8ರಂದು ಖಾಯಂ ನ್ಯಾಯಮೂರ್ತಿಯಾದರು.



Ads on article

Advertise in articles 1

advertising articles 2

Advertise under the article