ಕರ್ತವ್ಯಕ್ಕೆ ರಜೆ ಹಾಕಿದ್ದ ಹಿರಿಯ ಪೊಲೀಸ್ ಅಧಿಕಾರಿ ಮಹಿಳಾ ಕಾನ್ಸ್‌ಟೆಬಲ್ ಜೊತೆ ಲಾಡ್ಜ್‌ನಲ್ಲಿ ಪತ್ತೆ...ಆ ಮೇಲೆ ನಡೆದಿದ್ದೇನು..?
ಕರ್ತವ್ಯಕ್ಕೆ ರಜೆ ಹಾಕಿದ್ದ ಹಿರಿಯ ಪೊಲೀಸ್ ಅಧಿಕಾರಿ ಮಹಿಳಾ ಕಾನ್ಸ್‌ಟೆಬಲ್ ಜೊತೆ ಲಾಡ್ಜ್‌ನಲ್ಲಿ ಪತ್ತೆ...ಆ ಮೇಲೆ ನಡೆದಿದ್ದೇನು..?
ಕೌಟುಂಬಿಕ ವಿಚಾರಕ್ಕೆ ರಜೆ ಬೇಕು ಎಂದು ಕೇಳಿ ಕರ್ತವ್ಯಕ್ಕೆ ರಜೆ ಹಾಕಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಕಾನ್ಸ್‌ಟೆಬಲ್ ಜೊತೆ ಲಾಡ್ಜ್‌ನಲ್ಲಿ ಪತ್ತೆಯಾಗುವ ಮೂಲಕ ಇಲಾಖೆಯೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋ ಪ್ರದೇಶದ ಡಿಎಸ್‌ಪಿ ಹುದ್ದೆಯ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಕನೌಜಿಯಾ ಅವರು ಪ್ರಕರಣದ ರೂವಾರಿ. 2021ರಲ್ಲಿ ಉನ್ನಾವೋದ ಬಿಘಾಪುರ್ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಅವರು ಡಿಎಸ್‌ಪಿ ಹುದ್ದೆಗೆ ಪದೋನ್ನತಿ ಹೊಂದಿದ್ದರು.
ಆ ಬಳಿಕ, ಅವರು ಮಹಿಳಾ ಪೇದೆಯೊಬ್ಬರ ಜೊತೆಗೆ ಸಲುಗೆಯಿಂದ ಇರಲು ಶುರು ಮಾಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೌಟುಂಬಿಕ ವಿಚಾರಕ್ಕೆ ರಜೆ ಬೇಕು ಎಂದು ಹೇಳಿ ರಜೆಯಲ್ಲಿ ತೆರಳಿದ್ದರು.
ಅವರು ನೇರವಾಗಿ ಹೋಗಿದ್ದು ಕಾನ್ಪುರದ ಲಾಡ್ಜ್‌ವೊಂದಕ್ಕೆ ಅಲ್ಲಿ ಅವರು ಎರಡೂ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಮಹಿಳಾ ಪೇದೆ ಜೊತೆಗೆ ಸರಸಕ್ಕೆ ಇಳಿದಿದ್ದರು. ಇನ್ನೊಂದೆಡೆ, ಮನೆಗೆ ಬರದೇ ಇದ್ದ ಪತಿ ಶಂಕರ್ ಅವರನ್ನು ವಿಚಾರಿಸಲು ಪತ್ನಿ ಫೋನ್ ಮಾಡಿದ್ಧಾರೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ಆತಂಕಗೊಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಲಾಡ್ಜ್‌ಗೆ ತೆರಳಿ ನೋಡಿದಾಗ ಮಹಿಳಾ ಪೇದೆ ಜೊತೆಗೆ ಅಸಭ್ಯ ಭಂಗಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಲಾಡ್ಜ್‌ನ ಸಿಸಿಟಿವಿ ಕ್ಯಾಮರಾದಲ್ಲೂ ಈ ದೃಶ್ಯ ಸೆರೆಯಾಗಿದ್ದು, ಶಂಕರ್ ಕನೌಜಿಯಾ ಅವರನ್ನು ಅಮಾನತು ಮಾಡಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆಸಿದ ಪೊಲೀಸ್ ಇಲಾಖೆ, ಹಿರಿಯ ಪೊಲೀಸ್ ಅಧಿಕಾರಿಗೆ ಹಿಂಬಡ್ತಿ ಶಿಕ್ಷೆ ನೀಡುವಂತೆ ಶಿಫಾರಸ್ಸು ಮಾಡಿದ್ದು, ಅದರಂತೆ ಶಂಕರ್ ಕನೌಜಿಯಾ ಅವರನ್ನು ಕೆಳ ದರ್ಜೆಯ ಪೊಲೀಸ್ ಪೇದೆಯ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.