ಚೆಕ್ ಅಮಾನ್ಯ ಪ್ರಕರಣ: ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣದ ಮೊತ್ತಕ್ಕೆ ದಂಡ ವಸೂಲಿ ಅಧಿಪತ್ರ ಹೊರಡಿಸಬಹುದು
ಚೆಕ್ ಅಮಾನ್ಯ ಪ್ರಕರಣ: ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣದ ಮೊತ್ತಕ್ಕೆ ದಂಡ ವಸೂಲಿ ಅಧಿಪತ್ರ ಹೊರಡಿಸಬಹುದು
ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣ ಸಂಬಂಧಿಸಿದಂತೆ ಚೆಕ್ ಮೊತ್ತಕ್ಕೆ ನ್ಯಾಯಾಲಯವು "ದಂಡ ವಸೂಲಿ ಅಧಿಪತ್ರ" (FLW) ಹೊರಡಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ರಾಜಿ ಮೂಲಕ ಇತ್ಯರ್ಥವಾಗಿ ಲೋಕ ಅದಾಲತ್‌ನಲ್ಲಿ ಅವಾರ್ಡ್ ಹೊರಡಿಸಿದರೂ ಆರೋಪಿ ಹಣ ಪಾವತಿ ಮಾಡದಿದ್ದರೆ, ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಸಿಆರ್‌ಪಿಸಿ 421ರ ಅಡಿಯಲ್ಲಿ ದಂಡ ವಸೂಲಿ ಅಧಿಪತ್ರ (ಎಫ್‌ಎಲ್‌ಡಬ್ಲು) ಹೊರಡಿಸಿ ವಸೂಲಿ ಮಾಡಬಹುದು ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ ಎಂದ ಮಾತ್ರಕ್ಕೆ ಚೆಕ್ ಅಮಾನ್ಯ ಪ್ರಕರಣವನ್ನು ಸಿವಿಲ್ ಪ್ರಕರಣವನ್ನಾಗಿ ಪರಿವರ್ತನೆ ಮಾಡಲಾಗದು. ದೂರುದಾರರ ಹಕ್ಕನ್ನು ಚಲಾಯಿಸಲು ಕ್ರಿಮಿನಲ್ ಕಾನೂನು ಪ್ರಕಾರವೂ ಮುಂದುವರಿಯಬಹುದು ಎಂದು ನ್ಯಾಯಪೀಠ ಹೇಳಿದೆ.
Lok Adalth award in respect of cheque bounce case. Amount can be recovered by Fine Levy Warrant under Sec 421 of CrPC: Karnataka High Court, Justice K.S. Mudagal
Similar Case: ಸೋಮಶೇಖರ ರೆಡ್ಡಿ Vs ಜಿ.ಎಸ್. ಗೀತಾ
ಕರ್ನಾಟಕ ಹೈಕೋರ್ಟ್ WP 23519/2018 Dated 07-02-2020