ದಸ್ತಾವೇಜು ನೋಂದಣಿ: ಮುದ್ರಾಂಕದಲ್ಲಿ ಆಧಾರ್ ದೃಢೀಕರಣ- ಹೀಗೆ ಮಾಡದಿದ್ದರೆ ನಿಮ್ಮ ಆಸ್ತಿ ನೋಂದಣಿ ಆಗಲಿದೆ ದುಸ್ತರ..
ದಸ್ತಾವೇಜು ನೋಂದಣಿ: ಮುದ್ರಾಂಕದಲ್ಲಿ ಆಧಾರ್ ದೃಢೀಕರಣ- ಹೀಗೆ ಮಾಡದಿದ್ದರೆ ನಿಮ್ಮ ಆಸ್ತಿ ನೋಂದಣಿ ಆಗಲಿದೆ ದುಸ್ತರ..
ದಸ್ತಾವೇಜು ನೋಂದಣಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕರ್ನಾಟಕ ಸರ್ಕಾರ ನೋಂದಣಿ ಮುದ್ರಾಂಕದಲ್ಲಿ ಆಧಾರ್ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೀಗೆ ಮಾಡದಿದ್ದರೆ ನಿಮ್ಮ ಆಸ್ತಿ ನೋಂದಣಿ ಆಗಲಿದೆ ದುಸ್ತರ..
ನಾಗರಿಕರು ಕಾವೇರಿ 2 ಪೋರ್ಟಲ್‌ನಲ್ಲಿ ಸಿಟಿಜನ್ ಪ್ಲ್ಯಾಟ್‌ಫಾರಂನಲ್ಲಿ ಆಸ್ತಿ ವರ್ಗಾವಣೆ ಯಾ ದಸ್ತಾವೇಜು ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಪಕ್ಷಕಾರರ ಮಾಹಿತಿಯನ್ನು ನಮೂದಿಸುವಾಗ ಆಧಾರ್ ಕಾರ್ಡ್ ದೃಢೀಕರಣ ಮಾಡಬೇಕು.
ಆಧಾರ್‌ಕಾರ್ಡ್ ದೃಢೀಕರಣ ಮಾಡುವ ಮೂಲಕ ದಸ್ತಾವೇಜು ನೋಂದಣಿಯಲ್ಲಿ ತಮ್ಮ ಅರ್ಜಿಯನ್ನು ಹಾಕಬೇಕು.
ವಿಶೇಷವಾಗಿ ಗಮನಿಸಬೇಕಾದದ್ದು ಎಂದರೆ ನಿಮ್ಮ ಆಧಾರ್ ಹೆಸರಿನ ರೀತಿಯಲ್ಲೇ ದಸ್ತಾವೇಜುಗಳನ್ನು ನಮೂದು ಮಾಡಬೇಕು. ಆಧಾರ್‌ನಲ್ಲಿ ನಮೂದಿಸಲಾದ ಕೊನೆಯ ನಾಲ್ಕು ನಂಬರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕಾದ ದಸ್ತಾವೇಜಿನಲ್ಲಿ ನಮೂದು ಮಾಡಬೇಕು.