AIBE ಅಖಿಲ ಭಾರತ ಬಾರ್ ಪರೀಕ್ಷೆಗೆ ವಕೀಲರ ಮಂಡಳಿ ಸಜ್ಜು: ವೇಳಾಪಟ್ಟಿ ಪ್ರಕಟ
AIBE ಅಖಿಲ ಭಾರತ ಬಾರ್ ಪರೀಕ್ಷೆಗೆ ವಕೀಲರ ಮಂಡಳಿ ಸಜ್ಜು: ವೇಳಾಪಟ್ಟಿ ಪ್ರಕಟ
AIBE 2024 ಅಖಿಲ ಭಾರತ ಬಾರ್ ಪರೀಕ್ಷೆಗೆ ವಕೀಲರ ಮಂಡಳಿ ಸಜ್ಜುಗೊಂಡಿದ್ದು, ವೇಳಾಪಟ್ಟಿ ಪ್ರಕಟಗೊಂಡಿದೆ.
2024ರ ಜುಲೈನಲ್ಲಿ ಪರೀಕ್ಷೆಗಳನ್ನು ನಡೆಸಲು ಭಾರತೀಯ ವಕೀಲರ ಮಂಡಳಿ ಸಿದ್ಧತೆ ನಡೆಸಿದ್ದು, ರಾಷ್ಟ್ರಮಟ್ಟದಲ್ಲಿ ಕಾನೂನು ಮತ್ತು ವಕೀಲ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಈ ಪರೀಕ್ಷೆಯ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ಅಧಿಸೂಚನೆಯನ್ನು ಪ್ರಕಟಿಸಿರುವ ಅಖಿಲ ಭಾರತ ವಕೀಲರ ಮಂಡಳಿ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದ್ದು ಅದರ ವಿವರ ಹೀಗಿದೆ. allindiabarexamination.com
ಭಾರತದಲ್ಲಿ ವಕೀಲ ವೃತ್ತಿಗೆ ಪ್ರವೇಶಿಸಲು ಇದು ಪ್ರಮುಖ ಪರೀಕ್ಷೆಯಾಗಿದ್ದು, ವಿಶ್ವದಲ್ಲೇ ಭಾರತದ ಕಾನೂನು ಗುಣಮಟ್ಟ ಎತ್ತರಿಸಲು ಈ ಪರೀಕ್ಷೆಗಳು ಬಹುಮುಖ್ಯ ಪಾತ್ರ ವಹಿಸಿವೆ.
AIBE 19 Notification 2024ರ ಪ್ರಮುಖ ಅಂಶಗಳು –
ಪರೀಕ್ಷೆಯ ಸ್ವರೂಪ: The AIBE XIX ಆಫ್‌ಲೈನ್‌ನಲ್ಲಿ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಭೌತಿಕವಾಗಿ ಹಾಜರಿದ್ದು, ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆಯನ್ನು ಎದುರಿಸಬೇಕಾಗಿದೆ.
ಅರ್ಜಿ ಹಾಕುವುದು ಹೇಗೆ?: ಭಾರತೀಯ ವಕೀಲರ ಪರಿಷತ್ತು ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದೆ.
ಅರ್ಜಿ ಹಾಕುವ ಬಗೆ..
AIBE 19 ಪರೀಕ್ಷೆಯನ್ನು ಎದುರಿಸಲು ಬಯಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು. ನೋಂದಣಿ ಲಿಂಕ್‌ಗೆ ಕ್ಲಿಕ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆ ನಡೆಸಬಹುದು. ಯಾವ ರಾಜ್ಯದಲ್ಲಿ ಎನ್‌ರೋಲ್‌ಮೆಂಟ್ ಮಾಡಲಾಗಿದೆ, ಹೆಸರು, ಸಂಪರ್ಕ ಮಾಹಿತಿ ಮೊದಲಾದ ಮಾಹಿತಿಯನ್ನು ನಮೂದಿಸಬೇಕು.
ಅರ್ಜಿಯನ್ನು ಪೂರ್ಣಗೊಳಿಸಿದ ನಂತರ ಅರ್ಜಿ ಸಲ್ಲಿಕೆಯನ್ನು ದೃಢಪಡಿಸಬೇಕು. ನಿಮ್ಮ ನೋಂದಾಯಿತ ಫೋನ್ ನಂಬರ್‌ಗೆ ಅಥವಾ ಇಮೇಲ್‌ಗೆ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್‌ವರ್ಡ್ ಕಳಿಸಲಾಗುತ್ತದೆ. ಆ ಬಳಿಕ ನಿಗದಿತ ಶುಲ್ಕ ಪಾವತಿ ಮಾಡಬೇಕು. ಎಲ್ಲ ಮಾಹಿತಿಗಳನ್ನು ನಿಮ್ಮ ರೆಫರೆನ್ಸ್‌ಗಾಗಿ ಆಗಲೇ ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು. ಇದು ಮುಂದಿನ ಪ್ರಕ್ರಿಯೆಗೆ ಇದು ಅಗತ್ಯವಿರುತ್ತದೆ.
2024ರ ಜುಲೈ ಅಂತ್ಯಕ್ಕೆ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಈ ಪರೀಕ್ಷೆಗೆ ಯಾವುದೇ ವಯೋಮಿತಿ ನಿಗದಿಗೊಳಿಸಿಲ್ಲ. ಬಿಸಿಐನಿಂದ ಅಂಗೀಕರಿಸಲ್ಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಮೂರು ವರ್ಷದ ಅಥವಾ ಐದು ವರ್ಷದ ಎಲ್‌ಎಲ್‌ಬಿ ಪದವಿ ಪಡೆದಿರಬೇಕು.