-->
ಅವಾರ್ಡ್‌ ಡಿಕ್ರಿಯ ಅಮಲ್ಜಾರಿಯಲ್ಲಿ ಯಾವ ದಿನಾಂಕವನ್ನು ಪರಿಗಣಿಸಬೇಕು?: ಕರ್ನಾಟಕ ಹೈಕೋರ್ಟ್‌ ತೀರ್ಪು

ಅವಾರ್ಡ್‌ ಡಿಕ್ರಿಯ ಅಮಲ್ಜಾರಿಯಲ್ಲಿ ಯಾವ ದಿನಾಂಕವನ್ನು ಪರಿಗಣಿಸಬೇಕು?: ಕರ್ನಾಟಕ ಹೈಕೋರ್ಟ್‌ ತೀರ್ಪು

ಅವಾರ್ಡ್‌ ಡಿಕ್ರಿಯ ಅಮಲ್ಜಾರಿಯಲ್ಲಿ ಯಾವ ದಿನಾಂಕವನ್ನು ಪರಿಗಣಿಸಬೇಕು?: ಕರ್ನಾಟಕ ಹೈಕೋರ್ಟ್‌ ತೀರ್ಪು





ಸಹಕಾರಿ ಕಾಯ್ದೆಯಡಿ ಮಧ್ಯಸ್ಥಿಕೆದಾರರು ನೀಡುವ ಡಿಕ್ರಿಯನ್ನು ಪರಿಗಣಿಸಿ ಅಮಲ್ಜಾರಿ ಮಾಡುವಾಗ ಅವಾರ್ಡ್‌ ದಿನಾಂಕವನ್ನು ಪರಿಗಣಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಅಮಲ್ಜಾರಿ ಪ್ರಕ್ರಿಯೆ ನಡೆಸುವಾಗ ಮಧ್ಯಸ್ಥಿಕೆದಾರರ ಅವಾರ್ಡ್ ದಿನಾಂಕಕ್ಕೆ ಬದಲಾಗಿ ರಿಜಿಸ್ಟ್ರಾರ್ ನೀಡುವ ರಿಕವರಿ ಸರ್ಟಿಫಿಕೇಟ್‌ ನೀಡುವ ದಿನಾಂಕವನ್ನು ಪರಿಗಣಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.


ಕರ್ನಾಟಕ ಸಹಕಾರಿ ಕಾಯ್ದೆಯ ಅಡಿಯಲ್ಲಿ ಮಧ್ಯಸ್ಥಿಕೆದಾರರು ನೀಡುವ ಅವಾರ್ಡ್ ನ್ನು ಡಿಕ್ರಿ ಎಂದು ಪರಿಗಣಿಸಬಹುದು. ಅದನ್ನು ಸಿವಿಲ್ ನ್ಯಾಯಾಲಯದ ಡಿಕ್ರಿಗೆ ಸರಿಸಮನಾಗಿ ಪರಿಗಣಿಸಿ ಜಾರಿ ಮಾಡಬಹುದಾಗಿದೆ. ಅದನ್ನು ಜಾರಿಗೊಳಿಸಲು 12 ವರ್ಷಗಳ ಕಾಲಮಿತಿ ಇದೆ.

ಆದರೆ, ಈ ಕಾಲಮಿತಿಯನ್ನು ಪರಿಗಣಿಸುವಾಗ ಮಧ್ಯಸ್ಥಿಕೆದಾರರು ನೀಡುವ ಡಿಕ್ರಿಯ ದಿನಾಂಕಕ್ಕೆ ಬದಲಾಗಿ ಸಹಕಾರಿ ಸಂಘಗಳ ನೋಂದಣಾಧಿಕಾರಿ (ರಿಜಿಸ್ಟ್ರಾರ್‌) ನೀಡುವ ವಸೂಲಾತಿ ಪ್ರಮಾಣಪತ್ರದ ದಿನಾಂಕವನ್ನು ಪರಿಗಣಿಸತಕ್ಕದ್ದು ಎಂದು ನ್ಯಾಯಪೀಠ ಹೇಳಿದೆ.


Karnataka Co-operative Societies Act: Award of the arbitrator can be executed as decree within 12 years from the date of issuance of a certificate by the Registrar and not from the date of the award. Justice C.M. Poonacha, Karntaka High Court

Ads on article

Advertise in articles 1

advertising articles 2

Advertise under the article