ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ: 10 ವರ್ಷ ಅನುಭವ ಇರುವವರಿಗೆ ಅವಕಾಶ
ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ: 10 ವರ್ಷ ಅನುಭವ ಇರುವವರಿಗೆ ಅವಕಾಶ
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯನ್ನು ಹೊಸದಾಗಿ ತುಂಬಲು ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ. 10 ವರ್ಷ ಅನುಭವ ಇರುವವರಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಘಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 5ರಂದು ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಕಾನೂನು ಶಾಖೆಯಲ್ಲಿ ಲಭ್ಯವಿದೆ.
ಅರ್ಜಿದಾರರ ವಿದ್ಯಾರ್ಹತೆ ಹುಟ್ಟಿದ ದಿನಾಂಕ, ಜಾತಿ, ವರ್ಗ ಮತ್ತು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿರುವ ದಾಖಲೆಯನ್ನು ಸಲ್ಲಿಸಬೇಕು.
ಹಾಗೂ, ನ್ಯಾಯಾಲಯದಲ್ಲಿ ವಕಾಲತ್ತು ಮಾಡಿರುವ ಅನುಭವ ಇರುವ ವಿವಿಧ ರೀತಿಯ ಕ್ಲಿಷ್ಟಕರ ಮತ್ತು ಸಂಕೀರ್ಣ ವಿಚಾರಗಳನ್ನು ಒಳಗೊಂಡ ವಿವರ, ಅವಧಿ ಮತ್ತು ಅನುಭವಗಳ ಬಗ್ಗೆ ಪುರಾವೆಗಳ ಜೊತೆಗೆ ಅರ್ಜಿಯನ್ನು ಸಲ್ಲಿಸಬೇಕು.
ವಿಶೇಷ ಅರ್ಹತೆಗಳಿದ್ದರೆ, ಈ ಬಗ್ಗೆ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿಗಳು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಶಿಫಾರಸುಗೊಂಡ ನಂತರವೇ ಸರ್ಕಾರಕ್ಕೆ ಸಲ್ಲಿಕೆಯಾಗಲು ಅರ್ಹತೆ ಪಡೆಯುತ್ತದೆ.
ನಿಗದಿತ ಸಮಯದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.