-->
ನ್ಯಾಯಾಲಯಕ್ಕೆ ಆಧಾರ್‌, ಪಹಣಿ ನೀಡಿ ಜಾಮೀನು: ನಕಲಿ ಸೃಷ್ಟಿಸಿದ ವಂಚಕರ ಜಾಲ- ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಚುರುಕು

ನ್ಯಾಯಾಲಯಕ್ಕೆ ಆಧಾರ್‌, ಪಹಣಿ ನೀಡಿ ಜಾಮೀನು: ನಕಲಿ ಸೃಷ್ಟಿಸಿದ ವಂಚಕರ ಜಾಲ- ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಚುರುಕು

ನ್ಯಾಯಾಲಯಕ್ಕೆ ಆಧಾರ್‌, ಪಹಣಿ ನೀಡಿ ಜಾಮೀನು: ನಕಲಿ ಸೃಷ್ಟಿಸಿದ ವಂಚಕರ ಜಾಲ- ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಚುರುಕು





ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದವರಿಗೆ ಜಾಮೀನು ಕೊಡಿಸಲು ನ್ಯಾಯಾಲಯದ ಜಾಮೀನು ಶೂರಿಟಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ವಂಚಿಸುತ್ತಿರುವ ಬಯಲಿಗೆ ಬಂದಿದೆ.


ಅಸಿಸ್ಟಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಹೆಸರಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪೋಕ್ಸೊ ಆರೋಪಿಯೊಬ್ಬನ ಜಾಮೀನಿಗೆ ಪ್ರಯತ್ನಿಸಿ ವಂಚನೆಗೆ ಯತ್ನಿಸಿರುವ ಪ್ರಕರಣ ದಾಖಲಾಗಿದೆ.


ನ್ಯಾಯಾಧೀಶರ ಸಮಯಪ್ರಜ್ಞೆಯಿಂದ ಎಎಸ್‌ಐ ಕಾನೂನು ಸಂಕಷ್ಟದಿಂದ ಪಾರಾಗಿ ನೆಮ್ಮದಿಯಿಂದ ನಿಟ್ಟುಸಿರುಬಿಟ್ಟಿದ್ದಾರೆ.


ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ನವೀದ್ ಪಾಶಾ ಎಂಬಾತನ ಜಾಮೀನಿಗೆ ಎಸ್‌.ವಿ. ಗೌಡಯ್ಯ(32) ತಮ್ಮ ಜಮೀನು ಭದ್ರತೆಯಾಗಿ ನೀಡಿ ಶೂರಿಟಿ ನೀಡಿದ್ದರು. ಈ ದಾಖಲೆಗಳನ್ನು ನಗರದ 3ನೇ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಶೂರಿಟಿ ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿತ್ತು.


ಶೂರಿಟಿ ನೀಡಿದ್ದ ಎಸ್‌.ವಿ. ಗೌಡಯ್ಯ ಹೆಸರಿನ ಆಧಾರ್ ಕಾರ್ಡ್ ವಿಳಾಸದ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸಂಗತಿ ಬಯಲಾಯಿತು. ಗೌಡಯ್ಯ ಅವರ ಆಧಾರ್ ಕಾರ್ಡ್ ಮತ್ತು ಜಮೀನು ದಾಖಲೆ ಸೃಷ್ಟಿಸಿ ನಕಲಿ ಶೂರಿಟಿ ನೀಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಯಿತು.


ಆಧಾರ್ ಕಾರ್ಡ್ ಕೂಡ ನಕಲಿ

2015ರಲ್ಲಿ ನಿವೃತ್ತರಾದ ಎಸ್.ವಿ. ಗೌಡಯ್ಯ ತಮ್ಮ ಸ್ವಂತ ಊರು ಸೂಲುಕುಂಟೆಯಲ್ಲಿ ಪತ್ನಿ ಜೊತೆಗೆ ನೆಲೆಸಿದ್ದು ಅವರ ಹೆಸರಿನಲ್ಲಿ 17 ಗುಂಟೆ ಜಮೀನು ಹೊಂದಿದ್ದರು. ಈ ದಾಖಲೆಗಳನ್ನು ಕಾವೇರಿ ತಂತ್ರಾಂಶದಲ್ಲಿ ಪಡೆದಿರುವ ವಂಚಕರು ಎಸ್.ವಿ. ಗೌಡಯ್ಯ ಎಂಬ ಹೆರಸಿನ ಆಧಾರ್ ಕಾರ್ಡ್ ಸೃಷ್ಟಿಸಿ ಬೇರೊಬ್ಬ ವ್ಯಕ್ತಿಯ ಫೋಟೋ ಹಾಕಿದ್ದರು.


ಬಳಿಕ, ಅವರದ್ದೇ ಹೆಸರಿನ ಪಹಣಿಯೊಂದಿಗೆ ನವೀದ್ ಪಾಷಾ ಎಂಬ ಆರೋಪಿಗೆ ಜಾಮೀನು ಶೂರಿಟಿಯಾಗಿ ನೀಡಿದ್ದರು. ಆರೋಪಿಗೆ ಸಲ್ಲಿಸಿದ್ದ ಜಾಮೀನು ದಾಖಲೆಗಳು ನಕಲಿ ಯಾ ಸೃಷ್ಟಿಸಿದ ದಾಖಲೆಗಳು ಎಂಬುದು ದೃಢಪಟ್ಟಿದ್ದು, ಇದರ ಹಿಂದಿರುವ ವಂಚಕರ ಜಾಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ಮಗ್ನರಾಗಿದ್ದಾರೆ.



Ads on article

Advertise in articles 1

advertising articles 2

Advertise under the article