ಸರ್ಕಾರಿ ನೌಕರರಿಗೆ ಆರ್‌ಎಸ್‌ಎಸ್ ಸಂಘಟನೆಯ ಬಾಗಿಲು ಮುಕ್ತ: 1966ರಿಂದ ಇದ್ದ ನಿಷೇಧ ತೆರವು
Tuesday, July 23, 2024
ಸರ್ಕಾರಿ ನೌಕರರಿಗೆ ಆರ್‌ಎಸ್‌ಎಸ್ ಸಂಘಟನೆಯ ಬಾಗಿಲು ಮುಕ್ತ: 1966ರಿಂದ ಇದ್ದ ನಿಷೇಧ ತೆರವು
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನ ಚಟುವಟಿಕೆ ಮತ್ತು ಸಂಘಟನೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಇನ್ನು ಮುಂದೆ ಸರ್ಕಾರಿ ನೌಕರರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ. 1966ರಿಂದ ಇದ್ದ ನಿಷೇಧ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಕೇಂದ್ರ ಸರ್ಕಾರ 2024ರ ಜುಲೈ 9ರಂದು ಆದೇಶ ಹೊರಡಿಸಿದ್ದು, 1966ರಲ್ಲಿ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿದೆ.
1966ರಲ್ಲಿ ಆರ್‌ಎಸ್‌ಎಸ್ ಮತ್ತು ಜಮಾತ್-ಎ-ಇಸ್ಲಾಮ್ ಸಂಘಟನೆಗಳ ಸದಸ್ಯತ್ವ ಪಡೆಯುವುದು ಮತ್ತು ಅದರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರಿಗೆ ನಿಷೇಧ ಹೇರಲಾಗಿತ್ತು. ಈ ಬಗ್ಗೆ ಭಾರತೀಯ ಸೇವಾ ನಿಯಮದಲ್ಲಿ ನಿಯಮವನ್ನು ಅಳವಡಿಸಲಾಗಿತ್ತು.