ಫೋನ್ ಪೇ, ಗೂಗಲ್ ಪೇ ನಲ್ಲಿ ತಪ್ಪಾಗಿ ಹಣ ವರ್ಗಾವಣೆಯಾದರೆ ಏನು ಮಾಡಬೇಕು..? ಈ ಹಣ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್
ಫೋನ್ ಪೇ, ಗೂಗಲ್ ಪೇ ನಲ್ಲಿ ತಪ್ಪಾಗಿ ಹಣ ವರ್ಗಾವಣೆಯಾದರೆ ಏನು ಮಾಡಬೇಕು..? ಈ ಹಣ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್
ಫೋನ್ ಪೇ, ಗೂಗಲ್ ಪೇ ಅಥವಾ ಬೇರೆ ಯಾವುದೇ ಪೇಮೆಂಟ್ ಆಪ್‌ನಲ್ಲಿ ಹಣವನ್ನು ಕಳುಹಿಸುವಾಗ ತಪ್ಪಾಗಿ ಹಣ ವರ್ಗಾವಣೆಯಾದರೆ ಏನು ಮಾಡಬೇಕು..? ಈ ಹಣ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್
ಇಂತಹ ಡಿಜಿಟಲ್ ಪಾವತಿಗಳು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(UPI) ಎಂದು ಹೇಳುತ್ತಾರೆ. ಡಿಜಿಟಲ್ ಪಾವತಿ ಮಾಡುವ ವಿಧಾನದ ಮೂಲಕ ಜನರು ಸುಲಭವಾಗಿ ಯುಪಿಐ ಮೂಲಕ ಯಾರಿಗೆ ಬೇಕಾದರೂ ಹಣವನ್ನು ಕಳುಹಿಸಬಹುದು ಯಾ ಸ್ವೀಕರಿಸಬಹುದು.
ಇಂತಹ ವ್ಯವಹಾರಗಳು ಮಾಡುವಾದ ಸಣ್ಣ ತಪ್ಪುಗಳಿಂದಾಗಿ ತಪ್ಪಾದ ಯುಪಿಐ ಐಡಿಯಲ್ಲಿ ಪಾವತಿ ಮಾಡಿಬಿಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ತಪ್ಪಾದ ಪಾವತಿಯನ್ನು ಮರಳಿ ಪಡೆಯಲು ಈ ಕೆಳಗಿನ ಸುಲಭ ಮಾರ್ಗಗಳನ್ನು ಅನುಸರಿಸಬೇಕು.
ಯುಪಿಐ(UPI) ಅಪ್ಲಿಕೇಶನ್ ಕಸ್ಟಮರ್ ಕೇರ್ ಜೊತೆಗೆ ಮಾತನಾಡಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿ ಪ್ರಕಾರ, ಬಳಕೆದಾರರು ತಕ್ಷಣ ಈ ಸಮಸ್ಯೆಯನ್ನು ಪೇಮೆಂಟ್ ಸರ್ವಿಸ್ ಪ್ರೊವೈಡರ್ ಯಾ ಪಾವತಿ ಸೇವಾ ಪೂರೈಕೆದಾರರಿಗೆ ವರದಿ ಮಾಡಬೇಕು.
ಯುಪಿಐ(UPI)ನಲ್ಲಿ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹಾಕಿದ ಬಗ್ಗೆ ವಿವರ ನೀಡಬೇಕು.
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಯಾವುದೇ ಯುಪಿಐ ಅಪ್ಲಿಕೇಶನ್ ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕ ನೀವು ಈ ವಿಷಯವನ್ನು ತಿಳಿಸಬಹುದು. ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ಮರುಪಾವತಿ ಮಾಡುವಂತೆ ಕೋರಬಹುದು.
NPCI ಪೋರ್ಟಲ್‌ನಲ್ಲಿ ದೂರು ನೀಡಿ..
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಯಾವುದೇ ಯುಪಿಐ ಅಪ್ಲಿಕೇಶನ್ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೂ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ನೀವು NPCI ಪೋರ್ಟಲ್‌ನಲ್ಲಿ ದೂರು ನೀಡಬಹುದು.
ಇದಕ್ಕೆ ನೀವು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬಹುದು
* NPCIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ನಂತರ What we do ಹೆಸರಿಗೆ ಟ್ಯಾಬ್ ಕ್ಲಿಕ್ ಮಾಡಿ
* ಇದಾದ ಬಳಿಕ UPI ಮೇಲೆ ಟ್ಯಾಪ್ ಮಾಡಿ
* ನಂತರ Dispute Redressal Mechanism ಆಯ್ಕೆ ಮಾಡಿ
* ದೂರು ವಿಭಾಗದ ಅಡಿಯಲ್ಲಿ ಯುಪಿಐ ವಹಿವಾಟು ಐಡಿ, ವರ್ಚುವಲ್ ಪಾವತಿ ವಿಳಾಸ, ವರ್ಗಾವಣೆಯಾದ ಮೊತ್ತ, ವಹಿವಾಟಿನ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಒಳಗೊಂಡಿರುವ ವಹಿವಾಟಿನ ವಿವರಗಳನ್ನು ನಮೂದಿಸಿ
* ಇಲ್ಲಿ ಇನ್ನೊಂದು ಖಾತೆಗೆ ತಪ್ಪಾಗಿ ವರ್ಗಾಯಿಸಲಾಗಿದೆ ಎಂಬ ಕಾರಣ ಆಯ್ಕೆ ಮಾಡಿ
* ಕೊನೆಯಲ್ಲಿ ದೂರನ್ನು ಸಲ್ಲಿಸಿ ಕ್ಲಿಕ್ ಮಾಡಿ.
ಬ್ಯಾಂಕ್‌ನ್ನು ಸಂಪರ್ಕಿಸಿ
ದೂರು ನೀಡಿದ ನಂತರವೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದಾದರೆ ನೀವು ಪಾವತಿ ಸೇವಾ ಪೂರೈಕೆದಾರರ ಬ್ಯಾಂಕ್ ಅಥವಾ ಹಣವನ್ನು ಕಳುಹಿಸಿರುವ ಖ್ಯಾತೆಯ ಬ್ಯಾಂಕ್‌ಗೆ ನಿಮ್ಮ ದೂರನ್ನು ದಾಖಲಿಸಬಹುದು. ಈ ದೂರನ್ನು PSP/TPAP ಅಪ್ಲಿಕೇಶನ್‌ನಲ್ಲಿ ದಾಖಲಿಸಬಹುದು.
ಓಂಬುಡ್ಸ್‌ಮನ್‌ಗೆ ದೂರು ನೀಡಿ
ಮೇಲಿನ ವಿಧಾನಗಳನ್ನು ಅನುಸರಿಸಿದ ನಂತರವೂ ದೂರಿಗೆ ಯಾವುದೇ ಪರಿಹಾರ ಸಿಗದಿದ್ದರೆ, 30 ದಿನಗಳ ನಂತರ ನೀವು ಡಿಜಿಟಲ್ ದೂರಿಗಾಗಿ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ರನ್ನು ಸಂಪರ್ಕಿಸಬಹುದು.
ಆರ್‌ಬಿಐ ಪ್ರಕಾರ ಯಾರು ಬೇಕಾದರೂ ಲೋಕಪಾಲ್‌ಗೆ ದೂರು ಸಲ್ಲಿಸಬಹುದು. ನಿಮ್ಮ ದೂರನ್ನು ಕಾಗದದಲ್ಲಿ ಬರೆದು ಅದನ್ನು ಪೋಸ್ಟ್ ಯಾ ಫ್ಯಾಕ್ಸ್ ಮೂಲಕ ಕಚೇರಿಗೆ ಕಳುಹಿಸಬಹುದು.