-->
ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಸಹಿತ ಹಲವು ಹುದ್ದೆಗಳ ನೇಮಕಾತಿ: 44228 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಸಹಿತ ಹಲವು ಹುದ್ದೆಗಳ ನೇಮಕಾತಿ: 44228 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಸಹಿತ ಹಲವು ಹುದ್ದೆಗಳ ನೇಮಕಾತಿ: 44228 ಹುದ್ದೆಗಳಿಗೆ ಅರ್ಜಿ ಆಹ್ವಾನ





ಭಾರತೀಯ ಅಂಚೆ ಇಲಾಖೆಯು ಬೃಹತ್ ಪ್ರಮಾಣದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಕಾರ್ಯ ಆರಂಭಿಸಿದೆ. ಗ್ರಾಮೀಣ ಡಾಕ್‌ ಸೇವಕ್, ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಸೇರಿದಂತೆ ಒಟ್ಟು 44,228 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.


SSLC ಅಥವಾ 10ನೇ ಕ್ಲಾಸ್‌ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಈ ಮೂಲಕ ಭರ್ಜರಿ ಉದ್ಯೋಗಾವಕಾಶ ತೆರೆದುಕೊಂಡಂತಾಗಿದೆ.


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ಮೊದಲಿಗೆ ಅಂಚೆ ಇಲಾಖೆಯ ನೇಮಕಾತಿ ಪೋರ್ಟಲ್‌ ವೆಬ್‌ಸೈಟ್‌ ವಿಳಾಸ https://indiapostgdsonline.gov.in ಗೆ ಭೇಟಿ ನೀಡಬೇಕು.


ಬಳಿಕ ತೆರೆದ ಮುಖಪುಟದಲ್ಲಿ 'Stage 1.Registration' ಎಂಬಲ್ಲಿ ಕ್ಲಿಕ್ ಮಾಡಬೇಕು. ನಂತರ 2 ಆಯ್ಕೆಗಳು ಪ್ರದರ್ಶಿತಗೊಳ್ಳುತ್ತಿದ್ದು, ಅವುಗಳಲ್ಲಿ 'Registration' ಎಂಬಲ್ಲಿ ಕ್ಲಿಕ್ ಮಾಡಬೇಕು. ಅಪ್ಲಿಕೇಶನ್‌ ಪುಟದಲ್ಲಿ ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ, ಲಿಂಗ, ಜಾತಿ, 10th ಪಾಸಾದ ವರ್ಷ, ಇತರೆ ಮಾಹಿತಿ ನೀಡಬೇಕು. ಬಳಿಕ ಮೊಬೈಲ್ ನಂಬರ್, ಇ-ಮೇಲ್‌ ವಿಳಾಸಕ್ಕೆ ಒಟಿಪಿ ಬರುತ್ತದೆ. ಅದನ್ನು ವ್ಯಾಲಿಟೇಡ್‌ ಮಾಡಿ. ಅಂದರೆ ನಿಮ್ಮದೇ ನಂಬರ್ ಎಂದು ಖಚಿತಪಡಿಸಿಕೊಳ್ಳುವ ಹಂತವಿದು. ನಂತರ 'Submit' ಎಂಬಲ್ಲಿ ಕ್ಲಿಕ್ ಮಾಡಬೇಕು. ಆಗ ರಿಜಿಸ್ಟ್ರೇಷನ್‌ ನಂಬರ್ ಕ್ರಿಯೇಟ್ ಆಗುತ್ತದೆ. ನಿಮ್ಮ ಸರ್ಕಲ್ ಹೆಸರು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ.


ಮುಂದಿನ ಹಂತದಲ್ಲಿ ನಂತರ ಮತ್ತೆ 'https://indiapostgdsonline.gov.in/ ವೆಬ್‌ ವಿಳಾಸಕ್ಕೆ ಹಿಂದಿರುಗಬೇಕು. ಇಲ್ಲಿ 'Stage 2.Apply Online >> Apply' ಆಯ್ಕೆ ಕ್ಲಿಕ್ ಮಾಡಬೇಕು. ರಿಜಿಸ್ಟ್ರೇಷನ್‌ ನಂಬರ್ ಎಂಟರ್ ಮಾಡಿ ನಿಮ್ಮ ಸರ್ಕಲ್ / ವೃತ್ತ ಆಯ್ಕೆ ಮಾಡಬೇಕು. 'Submit' ಎಂಬಲ್ಲಿ ಕ್ಲಿಕ್ ಮಾಡಿ ಬಳಿಕ ತೆರೆದ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್‌ ಪೂರ್ಣಗೊಳಿಸಬೇಕು.


ಮೂರನೇ ಹಂತದಲ್ಲಿ ಪುನಃ ಇಂಡಿಯನ್ ಪೋಸ್ಟ್‌ ಮುಖಪುಟ ವೆಬ್‌ಸೈಟ್‌ https://indiapostgdsonline.gov.in/ ಗೆ ಭೇಟಿ ನೀಡಬೇಕು. ಇಲ್ಲಿ 'Fee Payment >> Check Fee Status' ಆಯ್ಕೆ ಕ್ಲಿಕ್ ಮಾಡಬೇಕು. ಓಪನ್ ಆಗುವ ಪುಟದಲ್ಲಿ ರಿಜಿಸ್ಟ್ರೇಷನ್ ನಂಬರ್ ನೀಡಿ, 'Submit' ಎಂಬಲ್ಲಿ ಕ್ಲಿಕ್ ಮಾಡಬೇಕು. ನಂತರ ನೀವು ಇಲ್ಲೂ ಸಹ ಅರ್ಜಿ ಶುಲ್ಕ ಪಾವತಿಗೆ ಅಥವಾ ನಂತರದಲ್ಲಿ ಅರ್ಜಿ ಶುಲ್ಕ ಪಾವತಿಸಿರುವ ಬಗ್ಗೆ ಮಾಹಿತಿ ಚೆಕ್‌ ಮಾಡಿಕೊಳ್ಳಬಹುದು. ಈ ಹಂತದ ನಂತರದಲ್ಲಿ ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.


ಅರ್ಜಿ ಹಾಕಿದವರು ಶಾರ್ಟ್‌ ಲಿಸ್ಟ್‌ ಆದಲ್ಲಿ ನೇಮಕಾತಿ ಪ್ರಕ್ರಿಯೆಯ ಎರಡು ಹಂತದ ಡಾಕ್ಯುಮೆಂಟ್‌ ವೆರಿಫಿಕೇಶನ್‌ಗೆ ಕರೆಯಲಾಗುತ್ತದೆ. ಈ ವೇಳೆ ಮೇಲಿನ ದಾಖಲೆಗಳ ಮೂಲ ಪ್ರತಿಗಳು, ಎರಡು ಸೆಟ್‌ ಸ್ವಯಂ ದೃಢೀಕೃತ ಪ್ರತಿಗಳನ್ನು ಹಾಜರುಪಡಿಸಬೇಕಾಗುತ್ತದೆ.


ಅರ್ಜಿ ಸಲ್ಲಿಸಲು, ಡಾಕ್ಯುಮೆಂಟ್‌ ವೆರಿಫಿಕೇಶನ್‌ಗೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಅಂಕಪಟ್ಟಿ, ಅಧಿಕೃತ ಗುರುತಿನ ಚೀಟಿ / ಆಧಾರ್ ಕಾರ್ಡ್. ಜಾತಿ ಪ್ರಮಾಣ ಪತ್ರ, ವಿಶೇಷ ಚೇತನರಾಗಿದ್ದಲ್ಲಿ ಪ್ರಮಾಣ ಪತ್ರ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಾಗಿದ್ದಲ್ಲಿ ಪ್ರಮಾಣ ಪತ್ರ, ತೃತೀಯ ಲಿಂಗಿಗಳಾಗಿದ್ದಲ್ಲಿ ಪ್ರಮಾಣ ಪತ್ರ, ಜನ್ಮ ದಿನಾಂಕ ಪ್ರಮಾಣ ಪತ್ರ, ಸರ್ಕಾರಿ ಆಸ್ಪತ್ರೆಗಳಿಂದ ನೀಡಿದ ವೈದ್ಯಕೀಯ ಪ್ರಮಾಣ ಪತ್ರ ಇವುಗಳನ್ನು ಪಡೆದುಕೊಂಡಿರಬೇಕಾಗುತ್ತದೆ.


Ads on article

Advertise in articles 1

advertising articles 2

Advertise under the article