ಪೊಲೀಸರಿಂದಲೇ ಲಂಚ ಪಡೆದ ಕೆಎಸ್‌ಆರ್‌ಪಿ ಅಧಿಕಾರಿ: ಇನ್ಸ್‌ಪೆಕ್ಟರ್‌ನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು
ಪೊಲೀಸರಿಂದಲೇ ಲಂಚ ಪಡೆದ ಕೆಎಸ್‌ಆರ್‌ಪಿ ಅಧಿಕಾರಿ: ಇನ್ಸ್‌ಪೆಕ್ಟರ್‌ನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು
ಸೂಕ್ತ ಸ್ಥಳಕ್ಕೆ ನಿಯೋಜನೆ ಮಾಡುವುದಾಗಿ ತಿಳಿಸಿ ಅದಕ್ಕೆ ಪೊಲೀಸರಿಂದಲೇ ಲಂಚ ಪಡೆಯುತ್ತಿದ್ದ ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಕರ್ನಾಟಕ ಪೊಲೀಸ್ ಮೀಸಲು ಪಡೆಯ ಇನ್ಸ್‌ಪೆಕ್ಟರ್ ಮೊಹಮ್ಮದ್ ಅರಿಸ್ ಎಂದು ಗುರುತಿಸಲಾಗಿದೆ.
ಅತಿಥಿ ಗೃಹದಲ್ಲಿ ಕರ್ತವ್ಯ ನಿಯೋಜಿಸಲು 20 ಸಾವಿರ ಹಾಗೂ ಪ್ರತಿ ತಿಂಗಳು 6 ಸಾವಿರ ಹಣ ನೀಡಬೇಕು ಎಂದು ಕಾನ್ಸ್‌ಟೆಬಲ್ ಬಳಿ ಮೊಹಮ್ಮದ್ ಆರಿಸ್ ಬೇಡಿಕೆ ಇಟ್ಟಿದ್ದರು ಹಾಗೂ ಅವರು ಕಾನ್ಸ್‌ಟೆಬಲ್ ಅವರಿಂದ ಇದುವರೆಗೆ 50 ಸಾವಿರದಷ್ಟು ಲಂಚ ಪಡೆದುಕೊಂಡಿದ್ದರು.
ತಂದೆಯ ಅನಾರೋಗ್ಯದ ಕಾರಣದಿಂದ ಕಾನ್ಸ್‌ಟೆಬಲ್ ಕಳೆದ ಮೂರು ತಿಂಗಳಿನಿಂದ ಲಂಚದ ಹಣ ನೀಡಿರಲಿಲ್ಲ. ಬಾಕಿ ಹಣವನ್ನು ನೀಡದಿದ್ದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದರು. ಈ ಬಗ್ಗೆ ಕಾನ್ಸ್‌ಟೆಬಲ್ ನೀಡಿದ ದೂರಿನ ಪ್ರಕಾರ ಕೆಎಸ್‌ಆರ್‌ಪಿ ಅಧಿಕಾರಿ ಮೊಹಮ್ಮದ್ ಅರೀಸ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಮೊಹಮ್ಮದ್ ಆರೀಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಕೆಎಸ್‌ಆರ್‌ಪಿ ಮೀಸಲು ಪಡೆಯ 7ನೇ ಬೆಟಾಲಿಯನ್ ಪೊಲೀಸ್ ಇನ್ಸ್‌ಪೆಕ್ಟರ್