ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ, ಗ್ರಾಹಕರಿಗೆ ಶಾಕಿಂಗ್ ನ್ಯೂಸ್!?: ಮಹತ್ವದ ನಿರ್ಧಾರಕ್ಕೆ ಮುಂದಾದ ಮೋದಿ ಸರ್ಕಾರ
ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ, ಗ್ರಾಹಕರಿಗೆ ಶಾಕಿಂಗ್ ನ್ಯೂಸ್!?: ಮಹತ್ವದ ನಿರ್ಧಾರಕ್ಕೆ ಮುಂದಾದ ಮೋದಿ ಸರ್ಕಾರ
ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ, ಗ್ರಾಹಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್ ಸಿಗಲಿದೆ. ಕೇಂದ್ರದ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ರಾಷ್ಟ್ರೀಯ ಆರ್ಥಿಕ ವಲಯದಲ್ಲಿ ಭಾರೀ ಬದಲಾವಣೆಗೆ ಇದು ಕಾರಣವಾಗಲಿದೆ.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯದ ಸುಧಾರಣೆಗೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಇದಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದ ದೃಷ್ಟಿಯಿಂದ ಬ್ಯಾಂಕಿಂಗ್ ಕಂಪೆನಿಗಳ ಕಾಯ್ದೆ 1970 ಮತ್ತು 1980ರ ಕಾಯ್ದೆ(ಸ್ವಾದೀನ ಮತ್ತು ವರ್ಗಾವಣೆ) ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಈ ಹಿಂದಿನ ಎರಡು ಕಾಯ್ದೆಗಳ ಅಡಿ ಪ್ರಕಾರ ಬ್ಯಾಂಕ್‌ಗಳನ್ನು ಎರಡು ಹಂತದಲ್ಲಿ ರಾಷ್ಟ್ರೀಕರಣ ಮಾಡಲಾಗಿತ್ತು.
ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ತನ್ನ ಹೂಡಿಕೆಯನ್ನು ಸರ್ಕಾರವು ಶೇಕಡಾ 51ಕ್ಕಿಂತಲೂ ಕಡಿಮೆಗೊಳಿಸಬಹುದು. ಅಲ್ಲದೆ, ಬ್ಯಾಂಕ್‌ಗಳ ಆಡಳಿತ ಸುಧಾರಣೆ ಜೊತೆಗೆ ಹೂಡಿಕೆದಾರರ ರಕ್ಷಣೆಯನ್ನೂ ಹೆಚ್ಚಿಸಬಹುದು ಎಂದು ಹೇಳಲಾಗಿದೆ.