NI Act Sec 138: ಚೆಕ್ ಅಮಾನ್ಯ ಪ್ರಕರಣ: ಮಾನ್ಯ ಸಾಲಕ್ಕೆ ಚೆಕ್ ನೀಡಿದ್ದು ಸಾಬೀತಾದರೆ ಸಾಕು, ದೂರುದಾರನ ಲೈಸನ್ಸ್ ಅಸ್ತಿತ್ವ ಅನಗತ್ಯ- ಹೈಕೋರ್ಟ್
NI Act Sec 138: ಚೆಕ್ ಅಮಾನ್ಯ ಪ್ರಕರಣ: ಮಾನ್ಯ ಸಾಲಕ್ಕೆ ಚೆಕ್ ನೀಡಿದ್ದು ಸಾಬೀತಾದರೆ ಸಾಕು, ದೂರುದಾರನ ಲೈಸನ್ಸ್ ಅಸ್ತಿತ್ವ ಅನಗತ್ಯ- ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೊಳಗಾಗಿರುವ ಚೆಕ್ ಆರೋಪಿಗೆ ನೀಡಲಾದ ಮಾನ್ಯವಾದ ಸಾಲದ ಮರುಪಾವತಿಗೆ ನೀಡಿದ್ದು ಎಂದು ಸಾಬೀತಾದರೆ ಸಾಕು. ಆ ಸಂದರ್ಭದಲ್ಲಿ ದೂರುದಾರರಿಗೆ ಸಾಲ ನೀಡುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಲೈಸನ್ಸ್ ಹೊಂದಿದ್ದಾರೆಯೇ ಎಂಬ ವಿಚಾರವು ಅನಗತ್ಯವಾಗಿದೆ ಎಂದು ರಾಜಸ್ತಾನ ಹೈಕೋರ್ಟ್ ತೀರ್ಪು ನೀಡಿದೆ.
ರಾಜಸ್ತಾನ ಹೈಕೋರ್ಟ್‌ನ ನ್ಯಾ. ಅರುಣ್ ಮೊಂಗಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್ 1881ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ವಿವಾದಿತ ಚೆಕ್ ಮಾನ್ಯ ಸಾಲಕ್ಕೆ ಸಂಬಂಧಿಸಿದಂತೆ ಎಂಬುದು ಮುಖ್ಯ. ಚೆಕ್ ಅಮಾನ್ಯದ ಬಗ್ಗೆ ನೋಟೀಸ್ ನೀಡಿದ ನಂತರವೂ ಪಾವತಿ ಮಾಡಲಾಗಿಲ್ಲವೇ ಎಂಬುದನ್ನು ನೋಡಬೇಕು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಚೆಕ್ ಅಮಾನ್ಯದ ಸಂದರ್ಭದಲ್ಲಿ ದೂರುದಾರರು ಸಾಲ ನೀಡಿಕೆಗೆ ಸಂಬಂಧಿಸಿದಂತೆ ಲೈಸನ್ಸ್ ಹೊಂದಿಲ್ಲ ಎಂಬುದು ಅಮುಖ್ಯ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣ: ಇಸಾಕ್ ಮೊಹಮ್ಮದ್ Vs ರಾಜಸ್ತಾನ ಸರ್ಕಾರ
ರಾಜಸ್ಥಾನ ಹೈಕೋರ್ಟ್, SB Crl Mis(Pet) 3691/ 2024 Dated 01-07-2024