NI Act Sec 138: ಚೆಕ್ ಅಮಾನ್ಯ ಪ್ರಕರಣ: ಲೀಗಲ್ ನೋಟೀಸ್ ಮಹತ್ವ; ಆರೋಪಿಯ ಕೊನೆ ಗೊತ್ತಿರುವ ವಿಳಾಸಕ್ಕೆ ಜಾರಿಗೊಳಿಸಿದರೂ ಆರೋಪಿ ಮೇಲೆ ಹೊಣೆಗಾರಿಕೆ
ಚೆಕ್ ಅಮಾನ್ಯ ಪ್ರಕರಣ: ಲೀಗಲ್ ನೋಟೀಸ್ ಮಹತ್ವ; ಆರೋಪಿಯ ಕೊನೆ ಗೊತ್ತಿರುವ ವಿಳಾಸಕ್ಕೆ ಜಾರಿಗೊಳಿಸಿದರೂ ಆರೋಪಿ ಮೇಲೆ ಹೊಣೆಗಾರಿಕೆ
ಚೆಕ್ ಅಮಾನ್ಯ ಪ್ರಕರಣದಲ್ಲಿ ಲೀಗಲ್ ನೋಟೀಸ್ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆರೋಪಿಯ ಕೊನೆ ಗೊತ್ತಿರುವ ವಿಳಾಸಕ್ಕೆ ಜಾರಿಗೊಳಿಸಿದರೆ ಆ ನೋಟೀಸ್ ಪರಿಗಣಿಸಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಸೆಕ್ಷನ್ 138 ಪ್ರಕಾರ, ಆರೋಪಿಯ ಕೊನೆ ಗೊತ್ತಿರುವ ವಿಳಾಸಕ್ಕೆ ಕಳುಹಿಸಿದರೆ ಅದು ಸಿಂಧುವಾಗಿದ್ದು, ಹೊಣೆಗಾರಿಕೆ ಆರೋಪಿ ಮೇಲೆ ಇರುತ್ತದೆ ಎಂದು ತೀರ್ಪು ಸ್ಪಷ್ಟಪಡಿಸಿದೆ.
ಲೀಗಲ್ ನೋಟಿಸ್ ಅನ್ನು ದೂರುದಾರರಿಗೆ ತಿಳಿದಿರುವ ಆರೋಪಿಯ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳುಹಿಸಿದರೆ ಅದನ್ನು ಸಲ್ಲಿಸಲಾಗಿದೆ ಎಂದು ಪರಿಗಣಿಸಲಾಗುವುದು. ಆದರೆ, ಅದು ತನಗೆ ಏಕೆ ಜಾರಿಯಾಗಲಿಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯದ್ದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಸಿ. ನಿರಂಜನ್ ಯಾದವ್ Vs ಡಿ. ರವಿ ಕುಮಾರ್
ಕರ್ನಾಟಕ ಹೈಕೋರ್ಟ್, CRP 814/2021 Dated 24-06-2024