-->
ವಕೀಲರು ಜಾಹೀರಾತು ನೀಡುವಂತಿಲ್ಲ: ಆನ್‌ಲೈನ್ ಮೂಲಕ ಜಾಹೀರಾತು ನೀಡುವ ನ್ಯಾಯವಾದಿಗಳಿಗೆ ಎದುರಾಗಲಿದೆ ಸಂಕಷ್ಟ

ವಕೀಲರು ಜಾಹೀರಾತು ನೀಡುವಂತಿಲ್ಲ: ಆನ್‌ಲೈನ್ ಮೂಲಕ ಜಾಹೀರಾತು ನೀಡುವ ನ್ಯಾಯವಾದಿಗಳಿಗೆ ಎದುರಾಗಲಿದೆ ಸಂಕಷ್ಟ

ವಕೀಲರು ಜಾಹೀರಾತು ನೀಡುವಂತಿಲ್ಲ: ಆನ್‌ಲೈನ್ ಮೂಲಕ ಜಾಹೀರಾತು ನೀಡುವ ನ್ಯಾಯವಾದಿಗಳಿಗೆ ಎದುರಾಗಲಿದೆ ಸಂಕಷ್ಟ





ತಮ್ಮ ವೃತ್ತಿ ಹಾಗೂ ಸೇವೆಗಳ ಕುರಿತಂತೆ ವಕೀಲರು ಜಾಹೀರಾತು ನೀಡುವಂತಿಲ್ಲ. ಆನ್‌ಲೈನ್ ಮೂಲಕ ಜಾಹೀರಾತು ನೀಡುವ ನ್ಯಾಯವಾದಿಗಳಿಗೆ ಇದೀಗ ಸಂಕಷ್ಟ ಎದುರಾಗಲಿದೆ.


ಭಾರತೀಯ ವಕೀಲರ ಮಂಡಳಿ (ಬಿಸಿಐ) ಈ ಬಗ್ಗೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ಇದರಲ್ಲಿ ಜಾಹೀರಾತು ನೀಡುವ ವಕೀಲರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.


ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿ ಆನ್‌ಲೈನ್ ವೆಬ್ ಸೈಟ್‌ಗಳ ಮೂಲಕ ವಕೀಲರು ಕೆಲಸ ಕೇಳುವುದರ ವಿರುದ್ಧ ಇತ್ತೀಚಿಗಷ್ಟೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಈ ತೀರ್ಪಿಗೆ ಪೂರಕವಾಗಿ ಬಿಸಿಐ ಈ ಸುತ್ತೋಲೆಯನ್ನು ಹೊರಡಿಸಿದೆ.


ವಕೀಲರ ಸೇವೆಗಳು ವ್ಯವಹಾರವಲ್ಲ ಎಂದಿರುವ ಬಿಸಿಐ, ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವ ಕ್ಷಿಕ್ಕರ್, ಸುಲೇಖಾ, ಜಸ್ಟ್ ಡಯಲ್ ಹಾಗೂ ಗ್ರೋಟಲ್ ಡಾಟ್ ಕಾಮ್‌ಗಳಿಗೆ ನೋಟೀಸ್ ಜಾರಿಗೊಳಿಸಿದೆ.


ತಮ್ಮ ಆನ್‌ಲೈನ್ ಫ್ಲ್ಯಾಟ್‌ಫಾರ್ಮ್‌ಗಳಿಂದ ಇಂತಹ ಜಾಹೀರಾತುಗಳನ್ನು ತೆಗೆದುಹಾಕುವಂತೆ ಬಿಸಿಐ ಸೂಚನೆ ನೀಡಿದೆ. ಇಂತಹ ಕ್ರಮವು ಬಿಸಿಐನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.


ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಜಾಹೀರಾತು ನೀಡಿ ಕೆಲಸ ಕೇಳುವ ಇಲ್ಲವೇ ಕೆಲಸ ಹುಡುಕುವ ವಕೀಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಸಿಐ ತನ್ನ ಅಧೀನವಿರುವ ಎಲ್ಲ ರಾಜ್ಯಗಳ ವಕೀಲರ ಪರಿಷತ್ತುಗಳಿಗೆ ಪತ್ರ ಬರೆದಿದೆ. ಬಿಸಿಐ ನಿಯಮ 36ರ ಅಡಿಯಲ್ಲಿ ಅಂತಹ ವಕೀಲರ ಸನದು ಅಮಾನತು ಮಾಡುವ ಇಲ್ಲವೇ ರದ್ದುಪಡಿಸುವ ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಲಾಗಿದೆ.


ಇದೇ ವೇಳೆ, ಇಂತಹ ಜಾಹೀರಾತು ನೀಡುವ ಅಂತರ್ಜಾಲ ವೇದಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಬಿಸಿಐ ನೀಡಿದ ಈ ಸೂಚನೆಯನ್ನು ಪಾಲಿಸಿದ ಕುರಿತು ಅನುಸರಣಾ ವರದಿಯನ್ನು ಆಗಸ್ಟ್ 10, 2024ರೊಳಗೆ ಸಲ್ಲಿಸುವಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಸೂಚಿಸಲಾಗಿದೆ.



Ads on article

Advertise in articles 1

advertising articles 2

Advertise under the article