ಪಿಂಚಣಿ ಯಾರ ಉದಾರ ಕೊಡುಗೆಯೂ ಅಲ್ಲ, ಅದು ನೌಕರರ ಹಕ್ಕು: ಸುಪ್ರೀಂ ಕೋರ್ಟ್
ಪಿಂಚಣಿ ಯಾರ ಉದಾರ ಕೊಡುಗೆಯೂ ಅಲ್ಲ, ಅದು ನೌಕರರ ಹಕ್ಕು: ಸುಪ್ರೀಂ ಕೋರ್ಟ್
ನೌಕರರಿಗೆ ನಿವೃತ್ತಿ ನಂತರ ಸಿಗುವ ಪಿಂಚಣಿ ಯಾರ ಉದಾರ ಕೊಡುಗೆಯೂ ಅಲ್ಲ. ಅದು ನೌಕರರಿಗೆ ಸಿಗಲೇಬೇಕಾದ ಹಕ್ಕಿನ ಹಣ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉತ್ತಮ ಪ್ರದೇಶ ರಸ್ತೆ ಸಾರಿಗೆ ನಿವೃತ್ತ ಅಧಿಕಾರಿಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ನೌಕರನೊಬ್ಬ ಪಿಂಚಣಿಗೆ ಅರ್ಹವಾಗಿರುವ ಹುದ್ದೆಯನ್ನು ಹೊಂದಿರದೇ ಇದ್ದರೆ ಆ ನೌಕರನು ಪಿಂಚಣಿ ಕೇಳಲು ಅವಕಾಶ ಇಲ್ಲ. ನಿಯಮಗಳ ಅಡಿಯಲ್ಲಿ ಪಿಂಚಣಿಯ ವ್ಯಾಪ್ತಿಯಲ್ಲಿ ಇಲ್ಲದ ನೌಕರನಿಗೆ ಪಿಂಚಣಿ ಕೊಡಿ ಎಂದು ಕೋರ್ಟ್‌ಗೆ ಕೂಡ ಹೇಳಲು ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮದಲ್ಲಿ ವಿಲೀನಗೊಂಡ ನೌಕರರು ಅದಕ್ಕಿಂತಲೂ ಹಿಂದೆ ಸರ್ಕಾರದ ನೌಕರರಾಗಿದ್ದವರು ಪಿಂಚಣಿಗೆ ಅರ್ಹರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ನೌಕರರ ಸೇವಾ ಷರತ್ತುಗಳು, ವಿಲೀನಕ್ಕೆ ಮುಂಚೆ ಸರ್ಕಾರದ ಅಧೀನದಲ್ಲಿ ಇದ್ದಾಗಿನ ನೌಕರರ ಸೇವಾ ಷರತ್ತುಗಳಿಗಿಂತ ಕಡಿಮೆ ಆಗಿರುವಂತಿಲ್ಲ ಎಂದು ಹೇಳಿದೆ.
ಆದರೆ, ನಿಗಮದಲ್ಲಿ ವಿಲೀನ ಆಗುವ ಮೊದಲು ಪಿಂಚಣಿಗೆ ಅರ್ಹವಾದ ಹುದ್ದೆಯನ್ನು ಹೊಂದಿರದೇ ಇದ್ದರೆ ಅಂಥವರಿಗೆ ಪಿಂಚಣಿ ಸಿಗುವುದಿಲ್ಲ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.