-->
ಸತತ ಮೂರು ದಿನ ಕೋರ್ಟ್ ರಜೆ: ಕೋರ್ಟ್‌ ಸಿಬ್ಬಂದಿ, ವಕೀಲರಿಗೆ ವೀಕೆಂಡ್ ಗಮ್ಮತ್ತು

ಸತತ ಮೂರು ದಿನ ಕೋರ್ಟ್ ರಜೆ: ಕೋರ್ಟ್‌ ಸಿಬ್ಬಂದಿ, ವಕೀಲರಿಗೆ ವೀಕೆಂಡ್ ಗಮ್ಮತ್ತು

ಸತತ ಮೂರು ದಿನ ಕೋರ್ಟ್ ರಜೆ: ಕೋರ್ಟ್‌ ಸಿಬ್ಬಂದಿ, ವಕೀಲರಿಗೆ ವೀಕೆಂಡ್ ಗಮ್ಮತ್ತು





ಈ ವಾರದಲ್ಲಿ ಸತತ ಮೂರು ದಿನ ಕೋರ್ಟ್ ಕಲಾಪಗಳಿಗೆ ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಅಧಿಕಾರಿಗಳು, ನೌಕರರು ಮತ್ತು ವಕೀಲರಿಗೆ ವೀಕೆಂಡ್ ಗಮ್ಮತ್ತು ದೊರೆಯಲಿದೆ.


ಸೆಪ್ಟಂಬರ್ 7ರಂದು ಶನಿವಾರ ಗಣೇಶ ಚತುರ್ಥಿ ಪ್ರಯುಕ್ತ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ, ಸೆಪ್ಟಂಬರ್ 6ರಂದು ಶುಕ್ರವಾರ ಕೂಡ ಸ್ವರ್ಣಗೌರಿ ವೃತ ಪ್ರಯುಕ್ತ ಹೈಕೋರ್ಟ್ ತನ್ನ ಎಲ್ಲ ಪೀಠಗಳಿಗೆ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಿದೆ.


ಬೆಂಗಳೂರಿನ ಪ್ರಧಾನ ಹೈಕೋರ್ಟ್ ಪೀಠ, ಕಲ್ಬುರ್ಗಿ ಮತ್ತು ಧಾರವಾಡ ಪೀಠಗಳಿಗೆ ರಜೆ ಘೋಷಿಸಲಾಗಿದೆ. ಇದರ ಜೊತೆಗೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೂ ರಜೆ ಘೋಷಿಸಲಾಗಿದೆ.


ಈ ರಜೆಗೆ ಬದಲಾಗಿ 28-09-2024ರಂದು ಕೋರ್ಟ್ ಕಲಾಪಗಳು ಇದ್ದು, ಎಲ್ಲ ನ್ಯಾಯಾಲಯಗಳು ಕರ್ತವ್ಯ ನಿರ್ವಹಿಸಲಿವೆ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.



Ads on article

Advertise in articles 1

advertising articles 2

Advertise under the article