ದರ್ಶನ್‌ಗೆ ಮನೆ ಊಟದ ವ್ಯವಸ್ಥೆ: ವಿರೋಧ ಮಾಡಲು ಅರ್ಜಿದಾರರು ಯಾರು?- ವಕೀಲರ ವಿರುದ್ಧ ಕಿಡಿ ಕಾರಿದ ಕರ್ನಾಟಕ ಹೈಕೋರ್ಟ್
ದರ್ಶನ್‌ಗೆ ಮನೆ ಊಟದ ವ್ಯವಸ್ಥೆ: ವಿರೋಧ ಮಾಡಲು ಅರ್ಜಿದಾರರು ಯಾರು?- ವಕೀಲರ ವಿರುದ್ಧ ಕಿಡಿ ಕಾರಿದ ಕರ್ನಾಟಕ ಹೈಕೋರ್ಟ್
ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರಿಗೆ ಮನೆಯ ಊಟ ಮತ್ತು ಹಾಸಿಗೆಯ ವ್ಯವಸ್ಥೆಗೆ ಅನುಮತಿ ನೀಡಬಾರದು ಎಂದು ವಕೀಲರ ಎನ್.ಪಿ. ಅಮೃತೇಶ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ದರ್ಶನ್‌ಗೆ ಮನೆ ಊಟ ಕಲ್ಪಿಸುವುದಕ್ಕೆ ವಿರೋಧ ಮಾಡಲು ಅರ್ಜಿದಾರರು ಯಾರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಹೇಮಂತ್ ಚಂದನ್‌ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಕೀಲ ಅಮೃತೇಶ್ ಅವರ ಅರ್ಜಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಮಾತ್ರವಲ್ಲದೆ, ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.
ಪ್ರಚಾರಕ್ಕಾಗಿ ಇಂತಹ ಅರ್ಜಿ ದಾಖಲಿಸಲಾಗಿದೆಯೇ..? ಅಷ್ಟಕ್ಕೂ ಜೈಲಿನಲ್ಲಿ ಇರುವ ಆರೋಪಿಗೆ ಮನೆ ಊಟ ಕೊಡುವುದನ್ನು ವಿರೋಧಿಸಲು ಅರ್ಜಿದಾರ ವಕೀಲರಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದೆ.
ದರ್ಶನ್ ಮನೆ ಊಟ ನೀಡಲು ಸರ್ಕಾರ ಅನುಮತಿಸಿದರೆ ಅದನ್ನು ಪ್ರಶ್ನಿಸಿಕೊಂಡು ಅರ್ಜಿ ಸಲ್ಲಿಸಬಹುದು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಹಂತದಲ್ಲಿ ವಕೀಲರು ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ದಂಡ ವಿಧಿಸಿ ಅರ್ಜಿಯನ್ನು ವಜಾ ಮಾಡಲಾಗುವುದು ಎಂದು ವಕೀಲರಿಗೆ ಎಚ್ಚರಿಕೆ ನೀಡಿತು.