1-7-2022 ರಿಂದ 31-7-2024ರಲ್ಲಿ ನಿವೃತ್ತರಾದ ನೌಕರರಿಗೆ ಮಹತ್ವದ ಸೂಚನೆ
1-7-2022 ರಿಂದ 31-7-2024ರಲ್ಲಿ ನಿವೃತ್ತರಾದ ನೌಕರರಿಗೆ ಮಹತ್ವದ ಸೂಚನೆ
1-7-2022 ರಿಂದ 31-7-2024ರಲ್ಲಿ ನಿವೃತ್ತರಾದ ನೌಕರರಿಗೆ ಒಂದು ಮಹತ್ವದ ಸೂಚನೆ ಮತ್ತು ಮನವಿ.
ಈ ಮೇಲೆ ತಿಳಿಸಿದ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸರ್ಕಾರ ಡಿ ಸಿ ಆರ್ ಜಿ (DCRG) ಕಮ್ಯೂಟೇಷನ್. ಗಳಿಕೆ ರಜೆ ನಗದೀಕರಣದಲ್ಲಿ ಬಹಳ ಅವೈಜ್ಞಾನಿಕ ತೀರ್ಮಾನ ತೆಗೆದುಕೊಂಡು ಅನ್ಯಾಯವೆಸಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಿವೃತ್ತ ಸರ್ಕಾರಿ ನೌಕರರು ಪ್ರಯತ್ನ ನಡೆಸಿದ್ದಾರೆ.
ಒಗ್ಗಟ್ಟಿನಲ್ಲಿ ಬಲ ಇದೆ ಎಂಬಂತೆ, ಈ ಅವಧಿಯಲ್ಲಿ ನಿವೃತ್ತರಾದ ನೌಕರರು ಒಟ್ಟಿಗೆ ಸೇರಲು ವೇದಿಕೆಯೊಂದನ್ನು ರೂಪಿಸಲಾಗಿದೆ.
ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಒತ್ತಡ ತರಲು. ಸರ್ಕಾರ ಒಪ್ಪದಿದ್ದಲ್ಲಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ಮಾಡಲು ಸಹೃದಯರಾದ ತಮ್ಮ ಬೆಂಬಲ ಬೇಕಾಗಿದೆ ಮತ್ತು ಈ ನೌಕರರಿಗೆ ನ್ಯಾಯ ದೊರೆಯಬೇಕಾಗಿದೆ.
ಆ ಕಾರಣಕ್ಕಾಗಿ ನಿಮಗೆ ಪರಿಚಯವಿರುವವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ವಾಟ್ಸ್ ಅಪ್ ಮಾಡಿ.
1. ಬಹು ಮುಖ್ಯವಾಗಿ ಹಾಸನ ಜಿಲ್ಲೆಯವರಾಗಿರಲಿ. ಯಾವುದೇ ಇಲಾಖೆಯ ನೌಕರರು ಈ ಅವಧಿಯಲ್ಲಿ ನಿವೃತ್ತರಾಗಿರಲಿ ಅವರ ಮಾಹಿತಿಯನ್ನು ನೀಡಿ.
2. ಬೇರೆ ಜಿಲ್ಲೆಯಲ್ಲಿ ನಿವೃತ್ತರಾಗಿದ್ದು ಈ ಜಿಲ್ಲೆಯಲ್ಲಿ ವಾಸ ಇರುವ ನೌಕರರಾಗಿದ್ದರೂ ಅವರ ಮಾಹಿತಿಯನ್ನು ನೀಡಿ.
3. ನಿಮ್ಮ ನಿವೃತ್ತಿ ದಿನಾಂಕ, ಹೆಸರು, ಇಲಾಖೆ, ಕಛೇರಿ ಹೆಸರು ದೂರವಾಣಿ ಸಂಖ್ಯೆಯ ಮಾಹಿತಿಯನ್ನ ದೂರವಾಣಿ ಸಂಖ್ಯೆ 9448346347ಗೆ ಕಳುಹಿಸಿ.
ನಮ್ಮ ಈ ಹೋರಾಟಕ್ಕೆ ತಮ್ಮ ಬೆಂಬಲ ಇರಲಿ ಎಂದು ನಿರೀಕ್ಷಿಸುವ ಶ್ರೀ ಹರೀಶ್ ಕಟ್ಟೇಬೆಳಗುಲಿ (ನಿವೃತ್ತ ಸರ್ಕಾರಿ ನೌಕರರು, ಹಾಸನ) ಮತ್ತು ಪದಾಧಿಕಾರಿಗಳು