-->
ಜಿಲ್ಲಾ ವ್ಯಾಪ್ತಿಯಲ್ಲಿ Any Where Registration: ಆಸ್ತಿ ನೋಂದಣಿಗೆ ಕೇಂದ್ರದ ಆಯ್ಕೆ ನಿಮ್ಮದು!

ಜಿಲ್ಲಾ ವ್ಯಾಪ್ತಿಯಲ್ಲಿ Any Where Registration: ಆಸ್ತಿ ನೋಂದಣಿಗೆ ಕೇಂದ್ರದ ಆಯ್ಕೆ ನಿಮ್ಮದು!

ಜಿಲ್ಲಾ ವ್ಯಾಪ್ತಿಯಲ್ಲಿ Any Where Registration: ಆಸ್ತಿ ನೋಂದಣಿಗೆ ಕೇಂದ್ರದ ಆಯ್ಕೆ ನಿಮ್ಮದು!





ಆಸ್ತಿ ನೋಂದಣಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸ ಹೆಜ್ಜೆಯನ್ನು ಇರಿಸಿದೆ. Any Where Registration ಎಂಬ ಪರಿಕಲ್ಪನೆಯನ್ನು ಜಿಲ್ಲಾ ವ್ಯಾಪ್ತಿಯ ವರೆಗೆ ವಿಸ್ತರಿಸಿದೆ.


ಸೆಪ್ಟೆಂಬರ್ 2ರಿಂದ ಆಸ್ತಿ ನೋಂದಣಿಗೆ ಜಿಲ್ಲೆಯ ಯಾವುದೇ ನೋಂದಾವಣಾಧಿಕಾರಿಗಳ ಕಚೇರಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.


ಜಮೀನು, ನಿವೇಶನ, ಮನೆ-ವಾಣಿಜ್ಯ ಕಟ್ಟಡಗಳು ಸೇರಿದಂತೆ ಯಾವುದೇ ಆಸ್ತಿಯನ್ನು ಇದುವರೆಗೆ ಯಾವುದೇ ಆಸ್ತಿಯನ್ನು ಇದುವರೆಗೂ ಆಯಾ ತಾಲೂಕು ವ್ಯಾಪ್ತಿಯ ನೋಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಮಾಡಿಸಬೇಕಿತ್ತು.


ಇನ್ನು ಮುಂದೆ ಜಿಲ್ಲಾ ವ್ಯಾಪ್ತಿಗೆ ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯದ ಯಾವುದೇ ಭಾಗದ ಕಚೇರಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆ ರೂಪಿಸಲಾಗುವುದು ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹೇಳಿದೆ.


ಈ ದಾಖಲೆ ಕಡ್ಡಾಯ ಬೇಕು..!

ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡುವ ಕೃತ್ಯಕ್ಕೆ ಕಡಿವಾಣ ಹಾಕಲು ಇಲಾಖೆ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಆಸ್ತಿ ದಾಖಲೆಗಳ ಜೊತೆಗೆ ಆಸ್ತಿಯ ಮಾಲಕತ್ವ ಹೊಂದಿರುವವರ ಆಧಾರ್, ಪಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಸಲ್ಲಿಸುವುದು ಕಡ್ಡಾಯವಾಗಿದೆ.


ಯಾವುದೇ ಭಾರತೀಯ ಅಥವಾ ಅನಿವಾಸಿ ಭಾರತೀಯ ಪ್ರಜೆ ಈ ಮೂರು ದಾಖಲೆಗಳಲ್ಲಿ ಒಂದು ದಾಖಲೆ ಹೊಂದಿರುತ್ತಾರೆ. ಹಾಗಾಗಿ, ಈ ಮೂರು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ ನಂತರವೇ ಆಸ್ತಿ ನೋಂದಣಿ ಮಾಡಲಾಗುತ್ತದೆ.


Ads on article

Advertise in articles 1

advertising articles 2

Advertise under the article