ಶೀಘ್ರದಲ್ಲೇ ಜಾರಿಗೆ ಬರಲಿದೆ "Any Where Registration": ಹೆಚ್ಚಿನ ಮಾಹಿತಿ ಇಲ್ಲಿದೆ...!
ಶೀಘ್ರದಲ್ಲೇ ಜಾರಿಗೆ ಬರಲಿದೆ "Any Where Registration": ಹೆಚ್ಚಿನ ಮಾಹಿತಿ ಇಲ್ಲಿದೆ...!
ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅತಿ ಶೀಘ್ರದಲ್ಲೇ ರಾಜ್ಯದಲ್ಲಿ "Any Where Registration" ಜಾರಿಗೆ ಬರಲಿದೆ.
ಏನಿದು "Any Where Registration"?: ಹೆಚ್ಚಿನ ಮಾಹಿತಿ ಇಲ್ಲಿದೆ . . . !
ಇದುವರೆಗೆ ಆಸ್ತಿ ವರ್ಗಾವಣೆ ಹಾಗೂ ದಾಖಲಾತಿಗಳ ನೋಂದಣಿಯನ್ನು ಆಯಾ ಜಿಲ್ಲಾ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಡೆಸಲಾಗುತ್ತಿತ್ತು.
ವ್ಯಾಪ್ತಿ ಹೊರತುಪಡಿಸಿ ಬೇರಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳ ನೋಂದಣಿಗೆ ಅವಕಾಶ ಇರಲಿಲ್ಲ. ಈ ವ್ಯವಸ್ಥೆಯನ್ನು ಬೆಂಗಳೂರನ್ನು ಹೊರತುಪಡಿಸಿದಂತೆ ರಾಜ್ಯದ ಎಲ್ಲೆಡೆ ಅನ್ವಯಿಸಲಾಗುತ್ತಿತ್ತು.
ಜನರಲ್ ಪವರ್ ಆಫ್ ಅಟಾರ್ನಿ(GPA) ಮತ್ತು ವೀಲುನಾಮೆಗೆ ಯಾವುದೇ ವ್ಯಾಪ್ತಿ ಇರಲಿಲ್ಲ. ಪಕ್ಷಕಾರರು ತಮಗೆ ಅನುಕೂಲವಾದ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಣಿ ಪ್ರಕ್ರಿಯೆಯನ್ನು ನಡೆಸಬಹುದಾಗಿತ್ತು.
ಆದರೆ, ಈಗ ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹತ್ವದ ನಿರ್ಧಾರವೊಂದರಲ್ಲಿ "Any Where Registration" ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಪಕ್ಷಕಾರರು ತಮಗೆ ಅನುಕೂಲವಾದ ಹಾಗೂ ತಮ್ಮ ಇಚ್ಚೆಗೆ ಅನುಸಾರ ರಾಜ್ಯದ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ದಾಖಲೆಗಳನ್ನು ನೋಂದಣಿ ಮಾಡಬಹುದಾಗಿದೆ. ಈ ವ್ಯವಸ್ಥೆಯನ್ನು ಇಲಾಖೆ ಶೀಘ್ರದಲ್ಲೆ ಜಾರಿಗೆ ತರಲಿದೆ.
ಹೆಚ್ಚಿನ ಮಾಹಿತಿಗೆ ಈ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ: 080-68265316