-->
ಭಾರತೀಯ ನ್ಯಾಯ್ ಸಂಹಿತೆ(BNS): ಪೊಲೀಸರು ಆರೋಪಿಯನ್ನು ವಿಚಾರಣೆಗೆ ಕರೆಯುವಾಗ ಈ ಮಾಹಿತಿ ನೀಡುವುದು ಕಡ್ಡಾಯ..!

ಭಾರತೀಯ ನ್ಯಾಯ್ ಸಂಹಿತೆ(BNS): ಪೊಲೀಸರು ಆರೋಪಿಯನ್ನು ವಿಚಾರಣೆಗೆ ಕರೆಯುವಾಗ ಈ ಮಾಹಿತಿ ನೀಡುವುದು ಕಡ್ಡಾಯ..!

ಭಾರತೀಯ ನ್ಯಾಯ್ ಸಂಹಿತೆ(BNS): ಪೊಲೀಸರು ಆರೋಪಿಯನ್ನು ವಿಚಾರಣೆಗೆ ಕರೆಯುವಾಗ ಈ ಮಾಹಿತಿ ನೀಡುವುದು ಕಡ್ಡಾಯ..!





ಭಾರತೀಯ ನ್ಯಾಯ ಸಂಹಿತೆ (BNS)ಯಡಿ ಎಫ್‌ಐಆರ್‌ ದಾಖಲಿಸುವುದು ಮತ್ತು ವಿಚಾರಣೆ ನಡೆಸುವ ವಿಚಾರದಲ್ಲಿ ಪಾಲಿಸಬೇಕಾದ ನಿಯಮ ಮತ್ತು ನಿಬಂಧನೆಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.


ಸಾರ್ವಜನಿಕರೂ ಈ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಈ ವಿಚಾರದಲ್ಲಿ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ವಿವರವಾಗಿ ಇಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ.


ಇದು ಕರ್ನಾಟಕ ಹೈಕೋರ್ಟ್ 19-07-2024ರಂದು ನೀಡಿದ ತೀರ್ಪಿನ ಸಾರವಾಗಿದ್ದು, ಈ ಅಗತ್ಯ ಮಾಹಿತಿಗಳನ್ನು ನೀಡಬೇಕೆಂದು ಪೊಲೀಸರಿಗೆ ನಿರ್ದೇಶನವನ್ನೂ ನೀಡಲಾಗಿದೆ.


ಟಿ.ಆರ್. ಶಿವಪ್ರಸಾದ್ Vs ಕರ್ನಾಟಕ ಸರ್ಕಾರ ಮತ್ತಿತರರು ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಹಾಗೂ ನಿರ್ದೇಶನವನ್ನು ನೀಡಿದೆ.


ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪ್ರಕಾರ ದಾಖಲಾದ ಯಾವುದೇ ಆರೋಪದ ಕುರಿತಾಗಿ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಿಕೊಳ್ಳಬಹುದಾಗಿದೆ. ಹಾಗೆ, ಕರೆಸಿಕೊಳ್ಳಲು ಅವರು ಸೆಕ್ಷನ್ 35ರ ಅಡಿಯಲ್ಲಿ ನೋಟೀಸ್ ನೀಡಲೇಬೇಕು. ಮತ್ತು ಈ ನೋಟೀಸಿನಲ್ಲಿ ವಿಚಾರಣೆ ಮಾಡಲಿರುವ ಪ್ರಕರಣದ ಅಪರಾಧದ ಸಂಖ್ಯೆ, ಪ್ರಥಮ ಮಾಹಿತಿ ವರದಿಯ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡಿರುವ ಚೆಕ್ ಲಿಸ್ಟ್‌ನ್ನು ಕಡ್ಡಾಯವಾಗಿ ಒದಗಿಸಬೇಕು.


ಒಂದು ವೇಳೆ, ಈ ಎಲ್ಲ ಅಗತ್ಯ ಮಾಹಿತಿ ಇರುವ ಚೆಕ್ ಲಿಸ್ಟ್ ಇಲ್ಲದೇ ಇದ್ದರೆ, ಅದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪ್ರಕಾರ ನೋಟೀಸ್ ಎಂದು ಹೇಳಲು ಬರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿ ಹೊರಡಿಸಬೇಕು ಎಂದು ನಿರ್ದೇಶಿಸಲಾಗಿದೆ.


ಒಂದು ವೇಳೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪೊಲೀಸರು ನೀಡುವ ನೋಟೀಸ್‌ನಲ್ಲಿ ಅಗತ್ಯ ಚೆಕ್ ಲಿಸ್ಟ್ ಒದಗಿಸದಿದ್ದರೆ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಹಾಗೆಯೇ, ಆರೋಪಿ ವಿರುದ್ಧ ಪೊಲೀಸರು ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.


ಪ್ರಕರಣ: ಟಿ.ಆರ್. ಶಿವಪ್ರಸಾದ್ Vs ಕರ್ನಾಟಕ ಸರ್ಕಾರ ಮತ್ತಿತರರು

ಕರ್ನಾಟಕ ಹೈಕೋರ್ಟ್, WP 15125/2023 Dated 19-07-2024


Ads on article

Advertise in articles 1

advertising articles 2

Advertise under the article