ಬಾಲ್ಯ ವಿವಾಹ ನಿಷೇಧ ಎಲ್ಲ ಧರ್ಮಕ್ಕೂ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು
ಬಾಲ್ಯ ವಿವಾಹ ನಿಷೇಧ ಎಲ್ಲ ಧರ್ಮಕ್ಕೂ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು
ಬಾಲ್ಯ ವಿವಾಹ ನಿಷೇಧ ಕಾಯ್ದೆ - 2006ರ ನಿಯಮಗಳು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆ. ಇದು ಎಲ್ಲ ಧರ್ಮಗಳಿಗಿಂತಲೂ ಮಿಗಿಲಾಗಿದೆ ಮತ್ತು ಈ ಕಾಯ್ದೆಗೆ ಯಾವ ಧರ್ಮವೂ ಹೊರತಾಗಿಲ್ಲ. ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
2012 ರಲ್ಲಿ ನಡೆದಿದ್ದ ವಿವಾಹಕ್ಕೆ ಸಂಬಂಧಿಸಿದಂತೆ ಬಾಲ್ಯ ವಿವಾಹ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಪತಿ ಹಾಘೂ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿಯೊಬ್ಬ ನಾಗರಿಕ ಮೊದಲು ದೇಶದ ಪ್ರಜೆಯಾಗುತ್ತಾನೆ. ಆ ಮೇಲೆಯೇ ಆತ ತನ್ನ ಧರ್ಮದ ಸದಸ್ಯನಾಗುತ್ತಾನೆ. ಆತ ಮೊದಲು ಭಾರತೀಯ. ಆಮೇಲೆ ಆತನ ಧರ್ಮ ಎಂದು ನ್ಯಾಯಪೀಠ ಸ್ಪಷ್ಟವಾಗಿ ಉಚ್ಚರಿಸಿದೆ.
2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಬಾಲ್ಯ ನಿಷೇಧವನ್ನು ನಿಷೇಧಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನಿಗಿಂತಲೂ ಈ ಕಾಯ್ದೆ ಮೇಲ್‌ಸ್ಥರದಲ್ಲಿ ಇದೆ. ಹಿಂದೂ, ಮುಸ್ಲಿಂ ಕ್ರೈಸ್ತ, ಪಾರ್ಸಿ ಸೇರಿದಂತೆ ಎಲ್ಲ ಧರ್ಮಕ್ಕೂ ಇದು ಅನ್ವಯ. ಪ್ರತಿ ಧರ್ಮದ ವೈಯಕ್ತಿಕ ಕಾನೂನಿಗಿಂತಲೂ ಮೊದಲು ನಾವು ಈ ನೆಲದ ಕಾನೂನಿಗೆ ತಲೆಬಾಗಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.