-->
CrPC Sec 311: ಪ್ರಕರಣದ ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಸಲ್ಲಿಸಿದಾಗ ಅನುಮತಿ ನೀಡಬೇಕೆಂದಿಲ್ಲ: ಕರ್ನಾಟಕ ಹೈಕೋರ್ಟ್‌

CrPC Sec 311: ಪ್ರಕರಣದ ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಸಲ್ಲಿಸಿದಾಗ ಅನುಮತಿ ನೀಡಬೇಕೆಂದಿಲ್ಲ: ಕರ್ನಾಟಕ ಹೈಕೋರ್ಟ್‌

CrPC Sec 311: ಪ್ರಕರಣದ ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಸಲ್ಲಿಸಿದಾಗ ಅನುಮತಿ ನೀಡಬೇಕೆಂದಿಲ್ಲ: ಕರ್ನಾಟಕ ಹೈಕೋರ್ಟ್‌





ಅಪರಾಧಿಕ ಪ್ರಕ್ರಿಯಾ ಸಂಹಿತೆ (CRPC) ಕಲಂ 311 ಅಡಿ ಅರ್ಜಿ ಸಲ್ಲಿಸಿದಾಗ, ಈ ಅರ್ಜಿಯು ಸದ್ರಿ ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ವಿಳಂಬಗೊಳಿಸುವ ಉದ್ದೇಶದಿಂದ ಹಾಕಲಾಗಿದೆ ಎಂದು ಭಾವಿಸಿದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಬಹುದಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಬೆಂಗಳೂರಿನ ಎರಡನೇ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 311ರ ಅಡಿ ಸಾಕ್ಷಿದಾರರನ್ನು ಅಡ್ಡ ವಿಚಾರಣೆ ಮಾಡಲು ಅನುಮತಿ ಕೋರಿ ಅರ್ಜಿ ಹಾಕಲಾಗಿದ್ದು, ಇದನ್ನು ತಿರಸ್ಕರಿಸಿದ ಆದೇಶವನ್ನು ಬದಿಗೆ ಸರಿಸಬೇಕು ಎಂದು ಮಾನ್ಯ ನ್ಯಾಯಪೀಠವನ್ನು ಕೋರಲಾಗಿತ್ತು.


ಆದರೆ, ಸದ್ರಿ ಪ್ರಕರಣವು ಕ್ರೈಂ ನಂಬರ್ 40/2009ರಿಂದ ಉದೃತವಾಗಿದ್ದು, 24-02-2009ರಲ್ಲಿ ಎಫ್‌ಐಆರ್‌ ಹಾಕಲಾಗಿತ್ತು. 2016 ಮಾರ್ಚ್‌ 3ರಂದು ಆರೋಪ ನಿಗದಿಪಡಿಸಲಾಗಿತ್ತು. ಮೊದಲನೇ ಸಾಕ್ಷಿದಾರರ ಮುಖ್ಯ ವಿಚಾರಣೆಯನ್ನು 2016 ಮಾರ್ಚ್‌ 24ರಂದು ನಡೆಸಲಾಗಿತ್ತು. ಎರಡನೇ ಸಾಕ್ಷಿದಾರರ ಮುಖ್ಯ ವಿಚಾರಣೆಯನ್ನು 2017 ಫೆಬ್ರವರಿ 23ರಂದು ನಡೆಸಲಾಗಿತ್ತು. ಅದಾಗಿ, ಆರು ವರ್ಷ ಕಳೆದು ಅರ್ಜಿದಾರರು ಸೆಕ್ಷನ್ 311 CRPC ಅಡಿ ಅರ್ಜಿ ಸಲ್ಲಿಸುತ್ತಾರೆ. ಅದನ್ನು ಮಾನ್ಯ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿರುತ್ತದೆ.


ಈ ಪ್ರಕರಣದ ವಿಚಾರಣೆ ಆರಂಭವಾಗಿ 15 ವರ್ಷ ಕಳೆದಿದೆ. ಆರು ವರ್ಷಗಳ ಹಿಂದೆ ಎರಡು ಪ್ರಮುಖ ಸಾಕ್ಷಿದಾರರ ಮುಖ್ಯ ವಿಚಾರಣೆ ಮತ್ತು ಅಡ್ಡ ವಿಚಾರಣೆ ನಡೆದಿದೆ. ಈ ಅಂತಿಮ ಹಂತದಲ್ಲಿ ಅರ್ಜಿದಾರರು ಮತ್ತೊಮ್ಮೆ ಸಿಆರ್‌ಪಿಸಿ ಸೆಕ್ಷನ್ 311ರ ಅಡಿ ಸಾಕ್ಷಿದಾರರನ್ನು ಅಡ್ಡ ವಿಚಾರಣೆ ಮಾಡಲು ಅನುಮತಿ ಕೋರಿ ಅರ್ಜಿ ಹಾಕಿರುವುದು ಪ್ರಕರಣದ ವಿಳಂಬಗೊಳಿಸುವ ಉದ್ದೇಶ ಎದ್ದುಕಾಣುತ್ತಿದೆ ಎಂಬುದನ್ನು ಹೈಕೋರ್ಟ್ ನ್ಯಾಯಪೀಠ ಗಮನಿಸಿತು.


ಸಾಕ್ಷಿದಾರರು ಮಹಾರಾಷ್ಟ್ರದ ಪುಣೆಯಿಂದ ಸಾಕಷ್ಟು ಬಾರಿ ಮಾನ್ಯ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿದ್ದರೂ ಅರ್ಜಿದಾರರ ವಕೀಲರು ಒಂದಲ್ಲ ಒಂದು ಕಾರಣವೊಡ್ಡಿ ಅಡ್ಡ ವಿಚಾರಣೆಯನ್ನು ನಡೆಸದೇ ಪ್ರಕರಣದ ನ್ಯಾಯತೀರ್ಮಾನವನ್ನು ವಿಳಂಬಗೊಳಿಸಿರುವುದು ಕಂಡುಬರುತ್ತಿದೆ. ಹಾಗಾಗಿ, ಮಾನ್ಯ ವಿಚಾರಣಾ ನ್ಯಾಯಾಲಯ ಮತ್ತು ಮೊದಲ ಮೇಲ್ಮನವಿ ನ್ಯಾಯಾಲಯದ ಆದೇಶ ಸರಿಯಾಗಿಯೇ ಇದ್ದು, ಈ ಆದೇಶವನ್ನು ಬದಿಗೆ ಸರಿಸುವ ಕೋರಿಕೆಯನ್ನು ಮಾನ್ಯ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ರ್ಯಾಯಪೀಠ, ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.


ಪ್ರಕರಣ: ಸ್ಟ್ಯಾನ್ಲಿ ಕೀರ್ತಿರಾಜ್ Vs ಕರ್ನಾಟಕ ರಾಜ್ಯ

ಕರ್ನಾಟಕ ಹೈಕೋರ್ಟ್, Crl.P. 6269/2024, Dated 22-07-2024

Ads on article

Advertise in articles 1

advertising articles 2

Advertise under the article