-->
ನಿವೃತ್ತಿ ನಂತರ ಜನ್ಮ ದಿನಾಂಕ ಬದಲಾವಣೆ ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ನಿವೃತ್ತಿ ನಂತರ ಜನ್ಮ ದಿನಾಂಕ ಬದಲಾವಣೆ ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ನಿವೃತ್ತಿ ನಂತರ ಜನ್ಮ ದಿನಾಂಕ ಬದಲಾವಣೆ ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು




 

ಉದ್ಯೋಗಿ ನಿವೃತ್ತಿ ನಂತರ ಜನ್ಮ ದಾಖಲೆಯನ್ನು ಬದಲಾವಣೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಉತ್ಪಾದನಾ ಘಟಕವೊಂದರಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸಿದ್ದ ವ್ಯಕ್ತಿ ತನ್ನ ನಿವೃತ್ತಿಯ ನಂತರ ಜನ್ಮ ದಿನಾಂಕವನ್ನು ಬದಲಾವಣೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಕಾರ್ಮಿಕ ನ್ಯಾಯಾಲಯ ಉದ್ಯೋಗಿಯ ಅರ್ಜಿಯನ್ನು ವಜಾಗೊಳಿಸಿತ್ತು.


ಈ ಅರ್ಜಿಯನ್ನು ಪ್ರಶ್ನಿಸಿ ಬಾಧಿತ ಕಾರ್ಮಿಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಹಕ್ಕಿನ ಬಗ್ಗೆ ಅನುಮಾನ ಉಂಟಾಗಿದೆ. ನಿವೃತ್ತಿಯ ನಂತರ ಜನ್ಮ ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.


ಪ್ರಕರಣದ ವಿವರ


ಅರ್ಜಿದಾರರು 1983ರಲ್ಲಿ ಉತ್ಪಾದನಾ ಘಟಕವೊಂದರಲ್ಲಿ ಕಾರ್ಮಿಕರಾಗಿ ಸೇವೆಗೆ ಸೇರ್ಪಡೆಗೊಂಡಿದ್ದರು. ಆಗ ಮೌಖಿಕವಾಗಿ ತಮ್ಮ ಜನ್ಮ ದಿನಾಂಕವನ್ನು 1952 ಮಾರ್ಚ್‌ 20 ಎಂದು ಹೇಳಿದ್ದರು. ಆದರೆ, ಅದಕ್ಕೆ ಯಾವುದೇ ಆಧಾರ ಅಥವಾ ಪುರಾವೆಗಳನ್ನು ನೀಡಿರಲಿಲ್ಲ. ಯಾವುದೇ ಸಮಸ್ಯೆ ತಕರಾರು ಇಲ್ಲದೆ ಸೇವಾವಧಿಯನ್ನು ಪೂರ್ಣಗೊಳಿಸಿದ್ದಲ್ಲದೆ ಈಗಾಗಲೇ ತಮಗೆ ದೊರೆತಿರುವ ಎಲ್ಲ ನಿವೃತ್ತಿ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.


1983ರಿಂದ 2006ರಲ್ಲಿ ನಿವೃತ್ತಿಯಾಗುವವರೆಗೆ ಕೆಲಸ ಮಾಡಿದರು. ತಮ್ಮ ಶಾಲಾ ಪ್ರಮಾಣಪತ್ರ ಮತ್ತು ಭವಿಷ್ಯ ನಿಧಿಗೆ ನೀಡಲಾದ ಮಾಹಿತಿಯ ಆಧಾರದಲ್ಲಿ ವ್ಯಕ್ತಿಯ ಜನ್ಮ ದಿನಾಂಕವು 1948 ಮಾರ್ಚ್‌ 10 ಎಂದು ದಾಖಲಿಸಲಾಗಿತ್ತು. ಆ ಪ್ರಕಾರ ಇನ್ನೂ ನಾಲ್ಕು ವರ್ಷಗಳ ಬಳಿಕ ತಾವು ನಿವೃತ್ತಿ ಹೊಂದಬೇಕಾಯಿತು ಎಂದು ಅರ್ಜಿದಾರರು ವಾದಿಸಿದ್ದರು.


ಈ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಿದ ಕಾರ್ಮಿಕ ನ್ಯಾಯಾಲಯ, ಕಾರ್ಮಿಕರ ಈ ಮನವಿ ಅರ್ಜಿಯನ್ನು ವಜಾಗೊಳಿಸಿತು. ಈ ಬಗ್ಗೆ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಪೀಠ, ಉದ್ಯೋಗಿ ತನ್ನ ಜನ್ಮ ದಿನಾಂಕವನ್ನು ಬದಲಾಯಿಸಲು ಕೆಲಸ ಮಾಡುವ ಸಮಯದಲ್ಲಿ ಸಾಕಷ್ಟು ಸಮಯಾವಕಾಶ ವಿತ್ತು. ಆದರೆ, ಆ ಬಗ್ಗೆ ಉದ್ಯೋಗಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎಂಬುದನ್ನು ಗಮನಿಸಿತು.


ಇದೀಗ ನಿವೃತ್ತಿಯ ನಂತರ ಪಿಎಫ್‌ ಮತ್ತು ಶಾಲಾ ಪ್ರಮಾಣ ಪತ್ರಗಳಲ್ಲಿ ಹುಟ್ಟಿದ ದಿನಾಂಕ ಸರಿಯಾಗಿದೆ ಎಂದು ವಾದಿಸಿದ್ದು ಅನುಮಾನ ಹುಟ್ಟಿಸುತ್ತದೆ. ನಿವೃತ್ತಿಯ ಬಳಿಕ ಅನಗತ್ಯ ಪ್ರಯೋಜನಗಳನ್ನು ಪಡೆಯಲು ಈ ಹಕ್ಕು ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದು, ನಿವೃತ್ತಿಯ ನಂತರ ನೌಕರರು ತಮ್ಮ ಜನ್ಮ ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು.

Ads on article

Advertise in articles 1

advertising articles 2

Advertise under the article