ಕೋರ್ಟಿನಲ್ಲಿ ಉದ್ಯೋಗದ ಆಮಿಷ: 42 ಲಕ್ಷ ರೂ. ವಂಚನೆ- ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ಕೋರ್ಟಿನಲ್ಲಿ ಉದ್ಯೋಗದ ಆಮಿಷ: 42 ಲಕ್ಷ ರೂ. ವಂಚನೆ- ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ನ್ಯಾಯಾಲಯಗಳಲ್ಲಿ ಕೆಳ ಹಂತದ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಪ್ರಕರಣ ಬಯಲಿಗೆ ಬಂದಿದೆ. ಉದ್ಯೋಗದ ಆಮಿಷ ಒಡ್ಡಿ 42 ಲಕ್ಷ ರೂ. ವಂಚನೆ ಮಾಡಿದ ಖತರ್ನಾಕ್ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನುಕೊಪ್ಪಳ ಮೂಲದ ಸಿದ್ದಲಿಂಗಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಇದುವರೆಗೆ ತಿಳಿದುಬಂದಿಲ್ಲ.
2023ರಲ್ಲಿ ತನಗೆ ನ್ಯಾಯಾಧೀಶರ ಪರಿಚಯವಿದ್ದು, ನೇರ ನೇಮಕಾತಿ ಮೂಲಕ ಪ್ರೋಸೆಸ್ ಸರ್ವರ್‌ಗಳು, ಟೈಪಿಸ್ಟ್ ಹಾಗೂ ಗುಮಾಸ್ತ ಹುದ್ದೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿದ್ದ ಆರು ಮಂದಿ ತಲಾ 7 ಲಕ್ಷ ರೂ.ಗಳಂತೆ ನೀಡಿದ್ದರು.
ಒಟ್ಟು 42 ಲಕ್ಷ ರೂ. ಪಡೆದಿದ್ದ ಸಿದ್ದಲಿಂಗಯ್ಯ ಹಿರೇಮಠ ಈಗ ಪೊಲೀಸರ ಅತಿಥಿಯಾಗಿದ್ಧಾನೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.