-->
ಪತ್ನಿಯನ್ನು ಹುಡುಕಿಕೊಡಲು ಕೋರ್ಟ್‌ ಮೊರೆ ಹೋದ ಪತಿ: ಅರ್ಜಿ ವಜಾಗೊಳಿಸಿ ದಂಡ ಹಾಕಿದ ಹೈಕೋರ್ಟ್‌

ಪತ್ನಿಯನ್ನು ಹುಡುಕಿಕೊಡಲು ಕೋರ್ಟ್‌ ಮೊರೆ ಹೋದ ಪತಿ: ಅರ್ಜಿ ವಜಾಗೊಳಿಸಿ ದಂಡ ಹಾಕಿದ ಹೈಕೋರ್ಟ್‌

ಪತ್ನಿಯನ್ನು ಹುಡುಕಿಕೊಡಲು ಕೋರ್ಟ್‌ ಮೊರೆ ಹೋದ ಪತಿ: ಅರ್ಜಿ ವಜಾಗೊಳಿಸಿ ದಂಡ ಹಾಕಿದ ಹೈಕೋರ್ಟ್‌





18 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಪತ್ನಿ ಮತ್ತು ಮಕ್ಕಳನ್ನು ಹುಡುಕಿಕೊಡಲು ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ವಜಾಗೊಳಿಸಿದ್ದು, 10 ಸಾವಿರ ರೂ. ದಂಡ ವಿಧಿಸಿದೆ.


ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾ. ವಿಶಾಲ್ ಧಗತ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ದಂಡದ ಮೊತ್ತವನ್ನು 30 ದಿನಗಳಲ್ಲಿ ಹೈಕೋರ್ಟ್ ನೌಕರರ ಸಂಘದಲ್ಲಿ ಠೇವಣಿ ಇಡುವಂತೆ ಆದೇಶ ನೀಡಿದೆ.


2006ರಿಂದ ನಾಪತ್ತೆಯಾಗಿರುವ ತನ್ನ ಹೆಂಡತಿ ಮತ್ತು ಮಕ್ಕಳನ್ನು ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ನಂದಕಿಶೋರ್ ಎಂಬಾತ ಹೈಕೋರ್ಟ್‌ ಮೆಟ್ಟಿಲೇರಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರು ಕಾನೂನನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ಅರ್ಜಿದಾರರಿಗೆ 10 ಸಾವಿರ ರೂ.ಗಳ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿತು.


ಪತ್ನಿಗೆ ಅರ್ಜಿದಾರರು ಅಸಹನೀಯ ಕಿರುಕುಳ ನೀಡುತ್ತಿದ್ದರು. ಅದನ್ನು ತಡೆಯಲಾಗದೆ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆಗೆ ಮನೆ ಬಿಟ್ಟು ಹೋಗಿದ್ದಾರೆ. ಈ ವಿಚಾರ ಅರ್ಜಿದಾರರಿಗೆ ಸ್ಪಷ್ಟವಾಗಿ ಗೊತ್ತಿದ್ದರೂ ಇದನ್ನು ಮರೆಮಾಚಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದು ಕಾನೂನಿನ ದುರ್ಬಳಕೆಯಲ್ಲದೆ ಮತ್ತೇನೂ ಅಲ್ಲ ಎಂದು ನ್ಯಾಯಪೀಠ ಖಾರವಾದ ಶಬ್ಧಗಳಲ್ಲಿ ವಾಗ್ದಂಡನೆ ವಿಧಿಸಿದೆ.


ಪ್ರಕರಣದ ವಿವರ

2006ರಲ್ಲಿ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆಗೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ಎಂದು ನಂದ ಕಿಶೋರ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಪತ್ನಿ ಮತ್ತು ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಸೂಚನೆಯಂತೆ ಪೊಲೀಸರು ಪತ್ನಿ ಮತ್ತು ಮಕ್ಕಳನ್ನು ಹಾಜರಪಡಿಸಿದರು.


ಹೈಕೋರ್ಟ್ ನ್ಯಾಯಪೀಠದ ಮುಂದೆ ಹಾಜರಾದ ಪತ್ನಿ ತಾನು ಮನೆ ಬಿಟ್ಟು ಹೋಗಲು ಕಾರಣವಾದ ವಿಷಯವನ್ನು ಮನವರಿಕೆ ಮಾಡಿದರು. ಪತಿಯ ಅಮಾನವೀಯತೆ, ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅರ್ಜಿದಾರರು ತಮಗೆ ನಿಷ್ಕರುಣೆಯಿಂದ ಥಳಿಸುತ್ತಿದ್ದರು ಎಂಬುದನ್ನು ಹೇಳಿ, ತಾನು ಜೀವ ಭಯದಿಂದ ಮಕ್ಕಳ ಜೊತೆಗೆ ಬೇರೆಯೇ ವಾಸಿಸುತ್ತಿದ್ದೇನೆ ಎಂದು ಹೇಳಿದರು.


Ads on article

Advertise in articles 1

advertising articles 2

Advertise under the article