ಸೆಪ್ಟೆಂಬರ್‌ನಿಂದ ರಾಜ್ಯದಲ್ಲಿ ಕೃಷಿ ಭೂಮಿಯ "ಪೋಡಿ" ಅಭಿಯಾನ: ಕಂದಾಯ ಸಚಿವಾಲಯ ಚಿಂತನೆ
ಸೆಪ್ಟೆಂಬರ್‌ನಿಂದ ರಾಜ್ಯದಲ್ಲಿ ಕೃಷಿ ಭೂಮಿಯ "ಪೋಡಿ" ಅಭಿಯಾನ: ಕಂದಾಯ ಸಚಿವಾಲಯ ಚಿಂತನೆ
2024ರ ಸೆಪ್ಟೆಂಬರ್ ತಿಂಗಳಿನಿಂದ ಪೋಡಿ ಅಭಿಯಾನ ನಡೆಸಲು ರಾಜ್ಯ ಕಂದಾಯ ಸಚಿವಾಲಯ ಚಿಂತನೆ ನಡೆಸಿದೆ.
ಸಾಗುವಳಿ ಮಾಡುವ ರೈತರಿಗೆ ಮಂಜೂರಾಗಿರುವ ಲಕ್ಷಾಂತರ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ಪೋಡಿ ದುರಸ್ತಿ ಆಗಿಲ್ಲ. ಯಾರಿಗೆ ಪೋಡಿ ಮಾಡಿಕೊಡಲು ಸಾಧ್ಯವೋ ಅವರಿಗೆಲ್ಲ ಮಾಡಿಕೊಡಲೇಬೇಕು. ಈ ಬಗ್ಗೆ ಪ್ರಾಯೋಗಿಕವಾಗಿ ಸಾಫ್ಟ್‌ವೇರ್ ಸಿದ್ದಪಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಡಿಜಿಟಲ್ App ಮೂಲಕ ಪೋಡಿ ದುರಸ್ತಿಗೆ ಚಾಲನೆ ನೀಡಲು ಸಚಿವಾಲಯ ಚಿಂತನೆ ನಡೆಸಿದ್ದು, ಹಾಸನ ಜಿಲ್ಲೆಯಲ್ಲಿ ಈ ಯೋಜನೆಯ ಪ್ರಾಯೋಗಿಕ ಅನುಷ್ಟಾನ ನಡೆಯುತ್ತಿದೆ.
ಪೋಡಿ ಬಗ್ಗೆ ಇರುವ ಗೊಂದಲ ನಿವಾರಿಸಲು ಯಾ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಾನೂನು ರೂಪಿಸಿದರೂ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಜನರಿಗೆ ಉಪಟಳ ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಮತ್ತು ಅಧಿಕಾರಿಗಳ ಉಪಟಳಕ್ಕೆ ಕಡಿವಾಣ ಹಾಕಲು ಕಂದಾಯ ಸಚಿವಾಲಯ ಸಿದ್ಧತೆ ನಡೆಸಿದೆ.
ರೈತರು ತಮ್ಮ ಸಾಗುವಳಿ ಭೂಮಿಯ ದಾಖಲೆಗಳನ್ನು ಮಾಡಿಕೊಡಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಪೋಡಿ ಅಭಿಯಾನ ನಡೆಸಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಅರ್ಜಿಗಳನ್ನು ಇತ್ಯರ್ಥ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಚಿವಾಲಯ ಮುಂದಾಗಿದೆ.