ಮುಸ್ಲಿಮರ ವಿವಾಹ, ವಿಚ್ಚೇದನ ಕಡ್ಡಾಯ ನೋಂದಣಿ: ಅಸ್ಸಾಂ ವಿಧಾನಸಭೆಯಲ್ಲಿ ಮಸೂದೆ
ಮುಸ್ಲಿಮರ ವಿವಾಹ, ವಿಚ್ಚೇದನ ಕಡ್ಡಾಯ ನೋಂದಣಿ: ಅಸ್ಸಾಂ ವಿಧಾನಸಭೆಯಲ್ಲಿ ಮಸೂದೆ
ಮುಸ್ಲಿಮರ ವಿವಾಹಗಳು ಮತ್ತು ವಿಚ್ಚೇದನಗಳನ್ನು ಕಡ್ಡಾಯವಾಗಿ ನೋಂದಾಯಿಸಲು ಮತ್ತು ಬಾಲ್ಯ ವಿವಾಹವನ್ನು ನಿಷೇಧಿಸುವ ಮಸೂದೆಯನ್ನು ಅಸ್ಸಾಂ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಚೇದನಗಳ ಕಡ್ಡಾಯ ನೋಂದಣಿ ಮಸೂದೆ 2024ನ್ನು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗನ್ ಮೋಹನ್ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದರು.
ಈ ಮಸೂದೆಯು 1935ರ ಕಾಯ್ದೆಯ ಬದಲಿಗೆ ಅಸ್ತಿತ್ವಕ್ಕೆ ಬರಲಿದೆ. ಇದುವರೆಗೆ ಅಸ್ಸಾಂನಲ್ಲಿ ಮುಸ್ಲಿಮರ ಕಾಯ್ದೆ ಮತ್ತು ವಿಚ್ಚೇದನ ನೋಂದಣಿ ಕಾಯ್ದೆ 1935 ಜಾರಿಯಲ್ಲಿ ಇತ್ತು.
ಈ ಕಾಯ್ದೆಯಲ್ಲಿ ವಯಸ್ಕರಲ್ಲದ (ಅಪ್ರಾಪ್ತರು) ವಿವಾಹಕ್ಕೆ ಸಿಂಧುತ್ವ ನೀಡಲಾಗಿತ್ತು. ಇಂತಹ ಸೆಕ್ಷನ್‌ಗಳನ್ನು ನೂತನ ಕಾಯ್ದೆಯಲ್ಲಿ ತೆಗೆದುಹಾಕಲಾಗಿದ್ದು, ಬಹುಪತ್ನಿತ್ವ, ಬಾಲ್ಯ ವಿವಾಹ ಮತ್ತು ಸಮ್ಮತಿ ವಿಚ್ಚೇದನಕ್ಕೆ ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಈ ಮಸೂದೆಯು ಬಾಲ್ಯ ವಿವಾಹವನ್ನು ತಡೆಯಲು ನೆರವಾಗಲಿದೆ ಹಾಗೆಯೇ ಬಹುಪತ್ನಿತ್ವದ ವಿಷಯದಲ್ಲಿ ಮುಸ್ಲಿಮ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯಕ್ಕೆ ಕೊನೆ ಹಾಡಲಿದೆ ಎಂದು ಸಚಿವರು ವಿಧಾನಸಭೆಯಲ್ಲಿ ತಿಳಿಸಿದರು.
ಈ ಕಾಯ್ದೆಯ ಪ್ರಕಾರ ಮದುವೆ ವಯಸ್ಸನ್ನು ಯುವತಿಗೆ 18 ಮೀರಿರಬೇಕು ಹಾಗೂ ಮತ್ತು ಯುವಕನಿಗೆ 21 ವರ್ಷ ಮೀರಿರಬೇಕು ಎಂದು ನಿಗದಿಪಡಿಸಲಾಗಿದೆ. ಇಬ್ಬರೂ ಮುಕ್ತ ಸಮ್ಮತಿಯನ್ನು ನೀಡುವ ಮೂಲಕ ಮದುವೆಗೆ ಸಿಂಧುತ್ವ ಬರುತ್ತದೆ ಎಂದು ಕಾಯ್ದೆಯಲ್ಲಿ ಪ್ರತಿಪಾದಿಸಲಾಗಿದೆ.