-->
NI Act | ಚೆಕ್ ಅಮಾನ್ಯ ಪ್ರಕರಣ: ದೂರುದಾರ ಒಪ್ಪಿದರೆ ಮಾತ್ರ ರಾಜಿ; ಹೈಕೋರ್ಟ್ ಏಕಪಕ್ಷೀಯವಾಗಿ ಕೇಸ್ ರದ್ದುಪಡಿಸಲಾಗದು- ಸುಪ್ರೀಂ ಕೋರ್ಟ್

NI Act | ಚೆಕ್ ಅಮಾನ್ಯ ಪ್ರಕರಣ: ದೂರುದಾರ ಒಪ್ಪಿದರೆ ಮಾತ್ರ ರಾಜಿ; ಹೈಕೋರ್ಟ್ ಏಕಪಕ್ಷೀಯವಾಗಿ ಕೇಸ್ ರದ್ದುಪಡಿಸಲಾಗದು- ಸುಪ್ರೀಂ ಕೋರ್ಟ್

ಚೆಕ್ ಅಮಾನ್ಯ ಪ್ರಕರಣ: ದೂರುದಾರ ಒಪ್ಪಿದರೆ ಮಾತ್ರ ರಾಜಿ; ಹೈಕೋರ್ಟ್ ಏಕಪಕ್ಷೀಯವಾಗಿ ಕೇಸ್ ರದ್ದುಪಡಿಸಲಾಗದು- ಸುಪ್ರೀಂ ಕೋರ್ಟ್






ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪೊಂದರಲ್ಲಿ, ದೂರುದಾರ ಒಪ್ಪಿದರೆ ಮಾತ್ರ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಸಿ.ಟಿ. ರವಿಕುಮಾರ್ ಹಾಗೂ ನ್ಯಾ. ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಚೆಕ್ ಅಮಾನ್ಯ ಪ್ರಕರಣದ ಫಿರ್ಯಾದಿ (ಮೇಲ್ಮನವಿದಾರ) ರಾಜಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸದೇ ಇದ್ದಾಗ ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್ 482 ಪ್ರಕಾರ ತನ್ನ ಅಂತರ್ಗತ ಅಧಿಕಾರ ಬಳಸಿ ಚೆಕ್ ಅಮಾನ್ಯ ಪ್ರಕರಣವನ್ನು ರದ್ದುಗೊಳಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.




ಆರೋಪಿ ರಾಜಿಗೆ ಒಪ್ಪಿದರೂ ಫಿರ್ಯಾದಿಯ ಸಮ್ಮತಿ ಇದ್ದರೆ ಮಾತ್ರ ಚೆಕ್‌ ಅಮಾನ್ಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂಬುದನ್ನು ಸ್ಪಷ್ಟಪಡಿಸಿದ ನ್ಯಾಯಪೀಠ, ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್‌ ಸೆಕ್ಷನ್ 147 ಮತ್ತು ಸಿಆರ್‌ಪಿಸಿಯ ಸೆಕ್ಷನ್ 482 ಎರಡು ವಿಭಿನ್ನ ಆಯಾಮವನ್ನು ಹೊಂದಿವೆ.


ನ್ಯಾಯದ ದುರುಪಯೋಗ ತಡೆಯಲು ಮತ್ತು ನ್ಯಾಯವನ್ನು ದೊರಕಿಸಿಕೊಡಲು ಸಿಆರ್‌ಪಿಸಿಯ ಸೆಕ್ಷನ್ 482ಅನ್ನು ಬಳಸಬಹುದಾಗಿದೆ. ಆದರೆ, ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್‌ ವಿಶೇಷ ಕಾಯ್ದೆಯಾಗಿದ್ದು, ದೂರುದಾರ ಒಪ್ಪಿಗೆ ನೀಡಿದರೆ ಮಾತ್ರ ರಾಜಿ ಮಾಡಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.


ರಾಜ್ ರೆಡ್ಡಿ ಕಲ್ಲೇಮ್ Vs ಹರ್ಯಾಣ ಸರ್ಕಾರ ಪ್ರಕರಣವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ನ್ಯಾಯಪೀಠ ಫಿರ್ಯಾದಿಯ ಸಮ್ಮತಿ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಿತ್ತು ಎಂಬುದನ್ನು ನೆನಪಿಸಿದೆ. ದೂರುದಾರರಿಗೆ ನ್ಯಾಯಯುತ ಪರಿಹಾರ ಪಾವತಿಸಲಾಗಿದೆ ಎಂಬ ಆಧಾರದ ಹೈಕೋರ್ಟ್ ತೀರ್ಪನ್ನು ಒಪ್ಪಲಾಗದು ಎಂದು ಸ್ಪಷ್ಟಪಡಿಸಿದೆ.


ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್‌ ಆಕ್ಟ್‌ನ ಸೆಕ್ಷನ್ 138 ರ ಅಡಿ ಪ್ರಕರಣದ ವಿಚಾರಣೆ ಬಾಕಿ ಇರುವಾಗ ಹೈಕೋರ್ಟ್ ಸಿಆರ್‌ಪಿಸಿ ಸೆಕ್ಷನ್ 482ಅಡಿ ಪ್ರಕರಣವನ್ನು ರಾಜಿಗೊಳಿಸಿ ರದ್ದುಗೊಳಿಸಿರುವ ಕ್ರಮ ಸಿಂಧುವಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.





ಪ್ರಕರಣದ ವಿವರ:

ದೂರುದಾರರು ಖಾತೆಯಲ್ಲಿ ಹಣದ ಕೊರತೆಯ ಹಿನ್ನೆಲೆಯಲ್ಲಿ ಚೆಕ್ ಅಮಾನ್ಯವಾಗಿದೆ ಎಂದು ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್‌ ಆಕ್ಟ್‌ನ ಸೆಕ್ಷನ್ 138 ರ ಅಡಿ ಪ್ರಕರಣ ದಾಖಲಿಸಿದ್ದಾರೆ.


ಇದೇ ವೇಳೆ, ಪ್ರಕರಣವನ್ನು ರಾಜಿ ಮಾಡಿಕೊಳ್ಳುವುದಾಗಿ ಆರೋಪಿ ಅರ್ಜಿ ಸಲ್ಲಿಸಿದ್ದಾರೆ. ಮನವಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ. ಆದರೂ, ಅರ್ಜಿಗೆ ಹೈಕೋರ್ಟ್ ಸಮ್ಮತಿಸಿದ್ದು, ತನ್ನ ನಿರ್ಧಾರವನ್ನು ಅದು ಸಮರ್ಥಿಸಿಕೊಂಡಿದೆ.


ದೂರುದಾರರಿಗೆ ನ್ಯಾಯಯುತ ಪರಿಹಾರ ಪಾವತಿಸಿದಾಗ ರಾಜಿಗೆ ದೂರುದಾರರ ಸಮ್ಮತಿ ಕಡ್ಡಾಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅಭಿಪ್ರಾಯ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 






Ads on article

Advertise in articles 1

advertising articles 2

Advertise under the article