ಪಡೀಲ್ ಹೋಂ ಸ್ಟೇ ದಾಳಿ: ಎಲ್ಲ ಆರೋಪಿಗಳ ಖುಲಾಸೆ- ಮಂಗಳೂರು ಜಿಲ್ಲಾ ನ್ಯಾಯಾಲಯದ ತೀರ್ಪು
Tuesday, August 6, 2024
ಪಡೀಲ್ ಹೋಂ ಸ್ಟೇ ದಾಳಿ: ಎಲ್ಲ ಆರೋಪಿಗಳ ಖುಲಾಸೆ- ಮಂಗಳೂರು ಜಿಲ್ಲಾ ನ್ಯಾಯಾಲಯದ ತೀರ್ಪು
ಕರಾವಳಿಯಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಮಂಗಳೂರಿನ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ನ್ಯಾಯಾಲಯ ತೀರ್ಪು ನೀಡಿದೆ.
12 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ವಿ. ಕಾಂತರಾಜು ಈ ತೀರ್ಪು ಪ್ರಕಟಿಸಿದ್ದಾರೆ.
2012ರ ಜುಲೈ 28ರಂದು ಪಡೀಲ್‌ನ ಹೋಂ ಸ್ಟೇವೊಂದರ ಮೇಲೆ ಹಿಂದೂ ಜಾಗರಣಾ ವೇದಿಕೆಯ ಆಗಿನ ನಾಯಕ ಸುಭಾಶ್ ಪಡೀಲ್ ನೇತೃತ್ವದಲ್ಲಿ ಯುವಕರ ಗುಂಪು ದಾಳಿ ನಡೆಸಿತ್ತು.
ಈ ಪ್ರಕರಣದಲ್ಲಿ 40 ಜನ ಆರೋಪಿಗಳ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು.
ವಿಜಯ್ ಮತ್ತು ಸಂಜನಾ ಎಂಬವರ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿತ್ತು.
ಇದೀಗ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಎಲ್ಲರೂ ಆರೋಪದಿಂದ ಮುಕ್ತರಾಗಿದ್ದಾರೆ.