-->
ಧಾರವಾಡ, ಕಲ್ಬುರ್ಗಿ ಹೈಕೋರ್ಟ್‌ ಪೀಠದಲ್ಲಿ ಪಿಐಎಲ್ ಸಲ್ಲಿಕೆಗೆ ಅವಕಾಶ: ಮದ್ಯದ ಅಂಗಡಿ ವಿರೋಧಿಸಿ ಮೊದಲ ಪಿಐಎಲ್

ಧಾರವಾಡ, ಕಲ್ಬುರ್ಗಿ ಹೈಕೋರ್ಟ್‌ ಪೀಠದಲ್ಲಿ ಪಿಐಎಲ್ ಸಲ್ಲಿಕೆಗೆ ಅವಕಾಶ: ಮದ್ಯದ ಅಂಗಡಿ ವಿರೋಧಿಸಿ ಮೊದಲ ಪಿಐಎಲ್

ಧಾರವಾಡ, ಕಲ್ಬುರ್ಗಿ ಹೈಕೋರ್ಟ್‌ ಪೀಠದಲ್ಲಿ ಪಿಐಎಲ್ ಸಲ್ಲಿಕೆಗೆ ಅವಕಾಶ: ಮದ್ಯದ ಅಂಗಡಿ ವಿರೋಧಿಸಿ ಮೊದಲ ಪಿಐಎಲ್





ಹೈಕೋರ್ಟ್‌ ಪ್ರಧಾನ ಪೀಠದಲ್ಲಿ ಇದ್ದ ಪಿಐಎಲ್ ಸಲ್ಲಿಕೆಗೆ ಅವಕಾಶವನ್ನು ಧಾರವಾಡ, ಕಲ್ಬುರ್ಗಿ ಪೀಠಕ್ಕೂ ವಿಸ್ತರಿಸಲಾಗಿದೆ. ಮದ್ಯದ ಅಂಗಡಿ ವಿರೋಧಿಸಿ ಮೊದಲ ಪಿಐಎಲ್ ಧಾರವಾಡ ಹೈಕೋರ್ಟ್ ಪೀಠದಲ್ಲಿ ಸಲ್ಲಿಕೆಯಾಗಿದ್ದು, ಹೊಸ ಮೈಲುಗಲ್ಲು ಸೃಷ್ಟಿಯಾಗಿದೆ.


ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಗಳನ್ನು ಸಲ್ಲಿಸಲು ಈ ವರೆಗೆ ಹೈಕೋರ್ಟ್‌ನ ಪ್ರಧಾನ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಸಲ್ಲಿಸಬಹುದಾಗಿತ್ತು. ಇದೀಗ ಈ ಅವಕಾಶವನ್ನು ಎಲ್ಲ ಪೀಠಗಳಿಗೂ ತೆರೆದಿಡಲಾಗಿದೆ.


ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಕ್ಷಿಪ್ರ ನ್ಯಾಯದಾನ ಒದಗಿಸಲು ಅನುಕೂಲವಾಗಲಿ ಎಂದು 2008ರಲ್ಲಿ ಧಾರವಾಡ, ಕಲ್ಬುರ್ಗಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಿತ್ತು. ದಶಕಗಳ ಹೋರಾಟದ ಫಲವಾಗಿ ಈ ಯಶಸ್ಸು ಲಭಿಸಿತ್ತು. ಇದೀಗ ಮತ್ತೊಂದು ಯಶಸ್ಸು ದೊರೆತಂತಾಗಿದೆ.


ವಿಸ್ತೃತ ಪೀಠಗಳಲ್ಲೂ ಪಿಐಎಲ್‌ ಪ್ರಕರಣದ ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಈ ಭಾಗದ ವಕೀಲರ ಸಂಘಗಳು, ಹೈಕೋರ್ಟ್ ಪೀಠಗಳ ವಕೀಲರ ಸಂಘಗಳು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿಯನ್ನು ಸಲ್ಲಿಸುತ್ತಲೇ ಬಂದಿದ್ದವು.


ಇತ್ತೀಚೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಧಾರವಾಡ ಪೀಠಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಹೈಕೋರ್ಟ್‌ ವಕೀಲರ ಸಂಘ ಪಿಐಎ್ ಅರ್ಜಿ ಸಲ್ಲಿಕೆ ಸೇರಿದಂತೆ ಹಸಿರು ಪೀಠ ಸ್ಥಾಪನೆ ಹಾಗೂ ನ್ಯಾಯಾಂಗ ಇಲಾಖೆಯ ಸೇವಾ ಪ್ರಕರಣಗಳ ವಿಚಾರಣೆಗಳನ್ನು ಇಲ್ಲಿಯೇ ನಡೆಸಲು ಅವಕಾಶ ಕೋರಿ ಮನವಿ ಮಾಡಿತ್ತು.


ಸಂಘದ ಮನವಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ಎರಡೂ ವಿಸ್ತೃತ ಪೀಠಗಳಲ್ಲಿ ಪಿಐಎಲ್‌ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.


ಪಿಐಎಲ್ ಸಲ್ಲಿಕೆ: ಎರಡು ಪ್ರಕಾರ

ಎರಡು ಪ್ರಕಾರಗಳ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಗಳನ್ನು ಸಲ್ಲಿಸಲು ಅವಕಾಶವಿದೆ. ಮೊದಲನೆಯದು ಪತ್ರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು. 


ಸಾರ್ವಜನಿಕರು ತಮ್ಮ ಮನವಿ ಪತ್ರವನ್ನು ಸಲ್ಲಿಸಿದಾಗ ಅದು ಪಿಐಎಲ್ ಸೆಲ್‌ಗೆ ಹೋಗಿ ಪಿಐಎಲ್‌ ಸಮಿತಿ ಪರಿಶೀಲನೆಗೆ ಒಳಪಡುತ್ತದೆ. ಸಮಿತಿ ಸದಸ್ಯರು ಈ ಪತ್ರವನ್ನು ಸಮಗ್ರವಾಗಿ ಪರಿಶೀಲಿಸಿ ಸಂಬಂಧಪಟ್ಟ ಮಾಹಿತಿ ಸಂಗ್ರಹಿಸಿ ಅದನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸುತ್ತಾರೆ.


ಎರಡನೆಯದು, ವಕೀಲರ ಮೂಲಕ ಪಿಐಎಲ್ ಪ್ರಕರಣ ದಾಖಲಿಸುವುದು. ಅದನ್ನು ವಕೀಲರೇ ಹೈಕೋರ್ಟ್‌ ಪೀಠದ ಮುಂದೆ ಅರ್ಜಿ ಸಲ್ಲಿಸುತ್ತಾರೆ.


ಹೈಬ್ರಿಡ್ ಮಾದರಿಯಲ್ಲಿ ವಿಚಾರಣೆ

ಧಾರವಾಡ ಮತ್ತು ಕಲ್ಬುರ್ಗಿ ಹೈಕೋರ್ಟ್ ಪೀಠದಲ್ಲಿ ಹೈಬ್ರಿಡ್ ಮಾದರಿಯಲ್ಲಿ ವಕೀಲರು ತಮ್ಮ ವಾದವನ್ನು ವೀಡಿಯೋ ಕಾನ್ಫರೆನ್ಸ್ (VC) ಮೂಲಕ ಮಂಡಿಸಲು ಅವಕಾಶವಿದೆ. ಮುಖ್ಯ ನ್ಯಾಯಮೂರ್ತಿಗಳು ವೀಡಿಯೋ ಕಾನ್ಫರೆನ್ಸ್ (VC) ಮೂಲಕವೇ ವಾದ-ಪ್ರತಿವಾದವನ್ನು ಆಲಿಸುತ್ತಾರೆ.


ಐಪಿಎಲ್‌ನಲ್ಲಿ ಕಾರ್ಮಿಕ ಕಾಯ್ದೆಯ ವಿಷಯಗಳು, ನಿರ್ಲಕ್ಷಿತ ಮಕ್ಕಳ ಕುರಿತು, ಆಹಾರ ಭದ್ರತೆ, ವನ್ಯಜೀವಿ, ಪುರಾತನ ಕಟ್ಟಡಗಳು, ನೈಸರ್ಗಿಕ ವಿಪತ್ತು, ಮೂಲಭೂತ ಸೌಕರ್ಯ ಮತ್ತು ಸಾಂಕ್ರಾಮಿಕ ರೋಗ ಇತ್ಯಾದಿಗಳ ಬಗ್ಗೆ ಪಿಐಎಲ್ ಸಲ್ಲಿಸಲು ಅವಕಾಶವಿದೆ.


ಆದರೆ, ಭೂ ಸುಧಾರಣಾ ಕಾಯ್ದೆ, ವೈವಾಹಿಕ ವಿವಾದಗಳು, ಶಿಕ್ಷಣ ಸಮಸ್ಥೆಗಳ ಪ್ರಕರಣಗಳು, ಪೊಲೀಸ್ ಪ್ರಕರಣಗಳು ಇತ್ಯಾದಿಗಳಿಗೆ ಪಿಐಎಲ್‌ನಲ್ಲಿ ಅವಕಾಶವಿಲ್ಲ.


Ads on article

Advertise in articles 1

advertising articles 2

Advertise under the article