-->
BNSS Sec 479: ವಿಚಾರಣಾಧೀನ ಕೈದಿಗಳಿಗೆ ಸಿಹಿ ಸುದ್ದಿ: ಮೂರನೇ ಒಂದರಷ್ಟು ಶಿಕ್ಷಾವಧಿ ಪೂರೈಸಿದವರಿಗೆ ಬಿಡುಗಡೆ

BNSS Sec 479: ವಿಚಾರಣಾಧೀನ ಕೈದಿಗಳಿಗೆ ಸಿಹಿ ಸುದ್ದಿ: ಮೂರನೇ ಒಂದರಷ್ಟು ಶಿಕ್ಷಾವಧಿ ಪೂರೈಸಿದವರಿಗೆ ಬಿಡುಗಡೆ

BNSS Sec 479: ವಿಚಾರಣಾಧೀನ ಕೈದಿಗಳಿಗೆ ಸಿಹಿ ಸುದ್ದಿ: ಮೂರನೇ ಒಂದರಷ್ಟು ಶಿಕ್ಷಾವಧಿ ಪೂರೈಸಿದವರಿಗೆ ಬಿಡುಗಡೆ





ವಿವಿಧ ಜೈಲುಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳಿಗೆ ಇದು ಸಿಹಿ ಸುದ್ದಿ. ತಮ್ಮ ಶಿಕ್ಷಾ ಅವಧಿಯ ಮೂರನೇ ಒಂದರಷ್ಟು ಅವಧಿಯನ್ನು ಪೂರೈಸಿದವರಿಗೆ ಬಿಡುಗಡೆ ಭಾಗ್ಯ ಲಭಿಸಲಿದೆ.


ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠ ಈ ಬಗ್ಗೆ ಸ್ಪಷ್ಟನೆ ನೀಡಿದೆ.


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 479 ಪೂರ್ವಾನ್ವಯವಾಗಲಿದ್ದು, ಅಪರಾಧಗಳಿಗೆ ನಿಗದಿಪಡಿಸಿರುವ ಶಿಕ್ಷೆಯ ಮೂರನೇ ಒಂದರ ಅವಧಿಯನ್ನು ಪೂರೈಸಿರುವ ಅರ್ಹ ವಿಚಾರಣಾಧೀನ ಖೈದಿಗಳಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶವಿದೆ.


ಮೊದಲ ಬಾರಿಗೆ ಅಪರಾಧ ಪ್ರಕರಣದಲ್ಲಿ ಸಿಲುಕಿರುವ ಮತ್ತು ಈ ಹಿಂದೆ ಯಾವುದೇ ಶಿಕ್ಷೆಗೆ ಗುರಿಯಾಗಿರದೇ ಇದ್ದರೆ, ಅಂತಹ ವಿಚಾರಣಾಧೀನ ಖೈದಿಗಳಿಗೆ ಈ ಅವಕಾಶ ಲಭ್ಯವಾಗಲಿದೆ.


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 479 ನ್ನು ದೇಶದ ಎಲ್ಲ ಜೈಲಿನ ಅಧಿಕಾರಿಗಳು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಪ್ರಕ್ರಿಯೆ ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ. ಜಾರಿ ಮಾಡಲು ಅಧಿಕಾರಿಗಳು ನಡೆಸಿದ ಪ್ರಕ್ರಿಯೆಯ ವರದಿಯನ್ನು ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಬೇಕೆಂದು ನಿರ್ದೇಶಿಸಲಾಗಿದೆ.


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) Sec 479 ಏನು ಹೇಳುತ್ತದೆ..?


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) Sec 479 ಅಪರಾಧಿಕ ಪ್ರಕ್ರಿಯಾ ಸಂಹಿತೆ (CrPC) ಯ ಸೆಕ್ಷನ್ 436ಗೆ ಪರ್ಯಾಯವಾಗಿ ಜಾರಿಗೆ ಬಂದಿದೆ. ಸೆಕ್ಷನ್ 436ಎ ಪ್ರಕಾರ ನಿಯಮದ ಪ್ರಕಾರ, ಆರೋಪಿ ನ್ಯಾಯಾಂಗ ಬಂಧನದಲ್ಲಿ ಇದ್ದಿರಬೇಕು ಹಾಗೆಯೇ, ಆತನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ತ್ವರಿತಗತಿಯ ಪ್ರಕ್ರಿಯೆ ನಡೆಸದೇ ಇದ್ದಾಗ, ಆರೋಪಿಯು ತನ್ನ ವಿರುದ್ಧದ ಆರೋಪಕ್ಕೆ ನಿಗದಿಪಡಿಸಿದ ಶಿಕ್ಷೆಯ ಅರ್ಧದಷ್ಟು ಸಮಯವನ್ನು ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರೆ ಮಾತ್ರ ಅಂತಹ ವ್ಯಕ್ತಿಗೆ ಜಾಮೀನು ನೀಡಬಹುದಾಗಿದೆ.



Ads on article

Advertise in articles 1

advertising articles 2

Advertise under the article