-->
ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯಕ್ಕೆ ಆಗ್ರಹ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಪ್ರತಿಭಟನೆ

ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯಕ್ಕೆ ಆಗ್ರಹ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಪ್ರತಿಭಟನೆ

ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯಕ್ಕೆ ಆಗ್ರಹ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಪ್ರತಿಭಟನೆ









ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯಕ್ಕೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಪ್ರತಿಭಟನೆ ನಡೆಸಿದ್ದು, ಹೋರಾಟಕ್ಕೆ ಮುನ್ನುಡಿ ಬರೆದಿದೆ.


ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ ಜುಲೈ 01 2022 ರಿಂದ ಜುಲೈ 31 2024ರ ನಡುವಿನ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.


ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕರಾದ ಹರೀಶ್ ಕಟ್ಟೇಬೆಳಗುಳಿ ಹೋರಾಟದ ನೇತೃತ್ವ ವಹಿಸಿದ್ದರು.


ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವು ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಪರಿಷ್ಕೃತ 7ನೇ ವೇತನ ಶ್ರೇಣಿಯನ್ನು ಅನುಷ್ಠಾನಕ್ಕೆ ತಂದಿರುತ್ತದೆ ಇದಕ್ಕಾಗಿ ನಾವೆಲ್ಲರೂ ಹೃದಯಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತೇವೆ. ವೇತನ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ: 01.08.2024 ರಿಂದ ನಗದಾಗಿ ಪಾವತಿ ಮಾಡಬಹುದಾಗಿದೆ ಎಂದು ತಿಳಿಸಿದರು.


ದಿನಾಂಕ: 01.07.2022 ರಿಂದ 31.07.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ನೌಕರರ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಲೆಕ್ಕಹಾಕುವ ಉದ್ದೇಶಗಳಿಗಾಗಿ ಮಾತ್ರ ಪರಿಗಣಿಸತಕ್ಕದ್ದು. ಆದರೆ ಈ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗೆ ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು ಆದೇಶಿಸಲಾಗಿದೆ. ಈ ಆದೇಶ ಅವೈಜ್ಞಾನಿಕವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.



ಈ ಆದೇಶದ ಪ್ರಕಾರ, 01-07-2022 ರಿಂದ 31-07-2024ರವರೆಗೆ (25 ತಿಂಗಳ ಅವಧಿಯಲ್ಲಿ) ನಿವೃತ್ತರಾದ, ನಿಧನ ಹೊಂದಿದ ಅಧಿಕಾರಿ, ನೌಕರರಿಗೆ ಹಳೆಯ ವೇತನ ದರದಲ್ಲೆ ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡುವಲ್ಲಿ ಪರಿಗಣಿಸುತ್ತಿರುವುದು ಇದು ಯಾವ ಸಾಮಾಜಿಕ, ಆರ್ಥಿಕ ನ್ಯಾಯ. ಸರ್ಕಾರದ ಈ ತೀರ್ಮಾನದಿಂದ ನಿವೃತ್ತಿ ಜೀವನದ ಸಂಧ್ಯಾಕಾಲದಲ್ಲಿರುವ ಈ ಅವಧಿಯ ನಿವೃತ್ತ ನೌಕರರಿಗೆ ಅತೀವ ಅಘಾತವಾಗಿರುತ್ತದೆ ಎಂದು ಹರೀಶ್ ಕಟ್ಟೆಬೆಳಗುಳಿ ಅಸಮಾಧಾನ ವ್ಯಕ್ತಪಡಿಸಿದರು.


ಸರ್ಕಾರಗಳಿಗಾಗಿ 35 ರಿಂದ 40 ವರ್ಷಗಳ ಸಾರ್ಥಕ ಸೇವೆ ಮಾಡಿ ನಿವೃತ್ತರಾದವರನ್ನು ಗೌರವದಿಂದ ಕಾಣುವುದು ಸರ್ಕಾರದ ಜವಾಬ್ದಾರಿ. ಆಗಸ್ಟ್ 01, 2024 ರಿಂದ ನಿವೃತ್ತಿ ಹೊಂದುವ ಅಧಿಕಾರಿ, ನೌಕರರು ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯವು ಲಭ್ಯವಾಗುತ್ತಿವೆ. ಅವರಂತೆ ನಾವುಗಳೂ ಸಹ 7ನೇ ವೇತನ ಆಯೋಗದ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಸೌಲಭ್ಯಗಳಾದ ಡಿಸಿಆರ್‍ಜಿ, ಕಮ್ಯೂಟೇಷನ್, ಗಳಿಕೆ ರಜೆಯ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿದ್ದೇವೆ ಎಂದು ಅವರು ಹೇಳಿದರು.


ಪ್ರಸ್ತುತ ಸೇವೆಯಲ್ಲಿರುವ ಇತರ ಅಧಿಕಾರಿ, ನೌಕರರಂತೆ ನಾವು ಕೂಡ ದಿನಾಂಕ:01-07-2022 ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸ ಬಾಕಿಯನ್ನು ಕೇಳುತ್ತಿರುವುದಿಲ್ಲ. ನಾವು ಕೇಳುತ್ತಿರುವುದು 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನ ದರದ ನಿವೃತ್ತಿ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸ ಮಾತ್ರ. ಆದ್ದರಿಂದ ನಮಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರ್ಥ ಮಾಡಿಕೊಂಡು ದಯಮಾಡಿ ಮೇಲಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೌಕರರಿಗೆ ನ್ಯಾಯಯೋಜಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ದೊರಕಿಸಿ ಕೊಡಲು ಕಟ್ಟೇಬೆಳಗುಲಿ ಒತ್ತಾಯಿಸಿದರು.


ನಾಡಿನ ಸಮಸ್ತ ನಿವೃತ್ತ ನೌಕರರು ಈ ಮೂಲಕ ಸರ್ಕಾರದಲ್ಲಿ ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.


ಪ್ರತಿಭಟನೆಯ ನಾಯಕತ್ವವನ್ನು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಗೋಪಾಲ್, ಕುಮಾರ್, ಲಿಂಗಮೂರ್ತಿ, ಪುಟ್ಟಸ್ವಾಮಿ, ಡಿ ಪುಟ್ಟರಾಜಪ್ಪ. ಬಾಲಾಲೋಚನ ಸೇರಿದಂತೆ ಇತರರು ವಹಿಸಿದ್ದರು.



Ads on article

Advertise in articles 1

advertising articles 2

Advertise under the article