-->
ನಿವೃತ್ತ ನೌಕರರ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ: ಹಕ್ಕಿನ ಗಳಿಕೆ ರಜೆ ನಗದೀಕರಣಕ್ಕೆ ಹಕ್ಕೊತ್ತಾಯ

ನಿವೃತ್ತ ನೌಕರರ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ: ಹಕ್ಕಿನ ಗಳಿಕೆ ರಜೆ ನಗದೀಕರಣಕ್ಕೆ ಹಕ್ಕೊತ್ತಾಯ

ನಿವೃತ್ತ ನೌಕರರ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ: ಹಕ್ಕಿನ ಗಳಿಕೆ ರಜೆ ನಗದೀಕರಣಕ್ಕೆ ಹಕ್ಕೊತ್ತಾಯ





ನಿವೃತ್ತ ನೌಕರರ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಮಹತ್ವದ ಈ ರಾಜ್ಯ ಕಾರ್ಯಕಾರಿಣಿಯಲ್ಲಿ ಹಕ್ಕಿನ ಗಳಿಕೆ ರಜೆ ನಗದೀಕರಣಕ್ಕೆ ಹಕ್ಕೊತ್ತಾಯದ ನಿರ್ಣಯವನ್ನು ಅಂಗೀಕರಿಸಲಾಯಿತು.


ದಿನಾಂಕ 1-7-2022 ರಿಂದ 31-7-204 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸಂವಿಧಾನಬದ್ದವಾಗಿ ಸಿಗಬೇಕಾದ ಡಿ ಸಿ ಆರ್ ಜಿ. ಕಮ್ಯೂಟೇಷನ್. ಗಳಿಕೆ ರಜೆ ನಗದೀಕರಣದ ಹಕ್ಕಿನ ಬಗ್ಗೆ ಹಕ್ಕೋತ್ತಾಯವನ್ನು ಮಾಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸಲಾಯಿತು.


ಸರ್ಕಾರ ನಿವೃತ್ತರ ಮನವಿಯನ್ನು ಸಾಮಾಜಿಕ ನ್ಯಾಯ ಮತ್ತು ಮಾನವೀಯ ನೆಲೆಯಲ್ಲಿ ಪರಿಗಣಿಸಿ ನಿವೃತ್ತ ನೌಕರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಕಾರ್ಯಕಾರಿಣಿ ಸರ್ಕಾರವನ್ನು ಆಗ್ರಹಿಸಿತು.


ಇಲ್ಲದೇ ಇದ್ದಲ್ಲಿ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸಿ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.


ಸರ್ಕಾರ ನಿವೃತ್ತ ನೌಕರರ ಡಿಸಿಆರ್ ಜಿ. ಕಮ್ಯೂಟೇಷನ್. ಗಳಿಕೆರಜೆ ನಗದೀಕರಣದ ಬಗ್ಗೆ ಮಾಡಿರುವ ಅವೈಜ್ಞಾನಿಕ ಆದೇಶವನ್ನು ಹಿಂಪಡೆದು ಈ ಅವಧಿಯಲ್ಲಿ ನಿವೃತ್ತರಾದವರಿಗೆ ಸಂವಿಧಾನಬದ್ದವಾಗಿ ದೊರಕಬೇಕಾದ ನಿವೃತ್ತಿ ಸೌಲಭ್ಯಗಳಾದ ಡಿಸಿಆರ್ ಜಿ. ಕಮ್ಯೂಟೇಷನ್. ಗಳಿಕೆರಜೆ ನಗದೀಕರಣ ಸೌಲಭ್ಯ ನೀಡಬೇಕೆಂಬ ನಿರ್ಣಯ ಕೈಕೊಳ್ಳಲಾಯಿತು.


ರಾಜ್ಯ ಕಾರ್ಯಕಾರಿಣಿಯ ಈ ಹಕ್ಕೊತ್ತಾಯ ನಿರ್ಣಯ ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸಂಚಾಲಕರಾದ ಷಣ್ಮುಕಯ್ಯ. ಅಶೋಕ್ ಸಜ್ಜನ್. ಹರೀಶ್ ಕಟ್ಟೇಬೆಳಗುಲಿ. ನಿವೃತ್ ಪ್ರಾಂಶುಪಾಲರಾದ ಗೋಪಾಲ್. ಜಿ ಕೆ ಕುಮಾರ್. ಪುಟ್ಟಸ್ವಾಮಿ. ಬಾಲಾಲೋಚನ. ಹಾ ಚನ್ನಬಸಪ್ಪ. ಕೆಂಪಸಿದ್ದಯ್ಯ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article