-->
ಕಂದಾಯ ದಾಖಲೆಯಲ್ಲಿ ಆದ ಬದಲಾವಣೆ ಆಸ್ತಿ ಮಾಲಕತ್ವ ಬದಲಾವಣೆ ಆಗದು: ಕರ್ನಾಟಕ ಹೈಕೋರ್ಟ್‌

ಕಂದಾಯ ದಾಖಲೆಯಲ್ಲಿ ಆದ ಬದಲಾವಣೆ ಆಸ್ತಿ ಮಾಲಕತ್ವ ಬದಲಾವಣೆ ಆಗದು: ಕರ್ನಾಟಕ ಹೈಕೋರ್ಟ್‌

ಕಂದಾಯ ದಾಖಲೆಯಲ್ಲಿ ಆದ ಬದಲಾವಣೆ ಆಸ್ತಿ ಮಾಲಕತ್ವ ಬದಲಾವಣೆ ಆಗದು: ಕರ್ನಾಟಕ ಹೈಕೋರ್ಟ್‌





ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾಯಿಸಿದ ತಕ್ಷಣ ಆಸ್ತಿಯ ಮಾಲಕತ್ವ ಬದಲಾವಣೆ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ರಾಯಚೂರಿನ ರೈತ ಮಹಿಳೆ ಚನ್ನಮ್ಮ ಹಿರೇಮಠ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ತೀರ್ಪು ನೀಡಿದೆ.


ಚನ್ನಮ್ಮ ಹಿರೇಮಠ ಎಂಬವರ ಹೆಸರಲ್ಲಿ ಇದ್ದ ಆಸ್ತಿಯ ದಾಖಲೆಗಳಲ್ಲಿ ಅವರ ಹೆಸರು ತೆಗೆದು ಕಂದಾಯ ಇಲಾಖೆಯ ಅಧಿಕಾರಿಗಳು ವಕ್ಫ್ ಬೋರ್ಡ್ ಹೆಸರು ಸೇರ್ಪಡೆ ಮಾಡಿದ್ದರು. ಈ ಬಗ್ಗೆ ಆದೇಶ ಹೊರಡಿಸಿದ ಕರ್ನಾಟಕ ಹೈಕೋರ್ಟ್, 60 ದಿನಗಳ ಒಳಗೆ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.


ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಆದೇಶಗಳನ್ನು ತಹಶೀಲ್ದಾರ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಒಂದು ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದರೆ ಅಂತಹ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಆ ಬಳಿಕ ಸೇರ್ಪಡೆ ಮಾಡಬೇಕು. ಆದರೆ, ಸದ್ರಿ ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೆ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.


ಚನ್ನಮ್ಮ ಹಿರೇಮಠ ಅವರ ಮನವಿ ಪರಿಗಣಿಸಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಉಪ ವಿಭಾಗಾಧಿಕಾರಿ ಈ ವಿಚಾರದಲ್ಲಿ ತಮಗೆ ಯಾವುದೇ ಅಧಿಕಾರ ಇಲ್ಲ, ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯವಿದ್ದರೆ ವಕ್ಫ್ ಕಾಯ್ದೆಯ ಪ್ರಕಾರ ಸೆಕ್ಷನ್ 83ರ ಅಡಿಯಲ್ಲಿ ವಕ್ಫ್ ನ್ಯಾಯಮಂಡಳಿಯ ಮೊರೆ ಹೋಗಿ ಎಂದು ಅಧಿಕಾರಿಗಳು ಬಿಟ್ಟಿ ಸಲಹೆ ನೀಡಿದ್ದಾರೆ.


ಆದರೆ, ದಾಖಲೆಗಳ ಪ್ರಕಾರ ಚನ್ನಮ್ಮ ಹಿರೇಮಠ ಆಸ್ತಿಯ ಮಾಲಕರಾಗಿದ್ದಾರೆ. ಅದಕ್ಕೆ ದಾಖಲೆಗಳು ಇವೆ. ಇನ್ನೊಂದೆಡೆ, ಆಸ್ತಿ ವಕ್ಫ್‌ ಬೋರ್ಡ್‌ಗೆ ಸೇರಿದ್ದು ಎನ್ನುವುದಕ್ಕೆ ಯಾವುದೇ ಸಾಖಲೆಗಳು ಇಲ್ಲ. ಹೀಗಾಗಿ ಅವರು ತಮ್ಮ ಆಸ್ತಿಗಾಗಿ ವಕ್ಫ್‌ ಟ್ರಿಬ್ಯೂನಲ್‌ಗೆ ಮೊರೆ ಹೋಗಬೇಕಾಗಿಲ್ಲ ಎಂದು ನ್ಯಾಯಪೀಠ ಪುನರುಚ್ಚರಿಸಿದ್ದಾರೆ.



Ads on article

Advertise in articles 1

advertising articles 2

Advertise under the article