SC-ST- ದೌರ್ಜನ್ಯ ತಡೆ ಕಾಯ್ದೆ: ವ್ಯಕ್ತಿಯ ಕೇವಲ ವ್ಯಕ್ತಿ "ನಿಂದನೆ" ಮಾತ್ರವಿದ್ದರೆ ಕಾಯ್ದೆಯಡಿ ಅಪರಾಧವಾಗದು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
SC-ST- ದೌರ್ಜನ್ಯ ತಡೆ ಕಾಯ್ದೆ: ವ್ಯಕ್ತಿಯ ಕೇವಲ ವ್ಯಕ್ತಿ "ನಿಂದನೆ" ಮಾತ್ರವಿದ್ದರೆ ಕಾಯ್ದೆಯಡಿ ಅಪರಾಧವಾಗದು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರನ್ನು ಅವಮಾನಿಸುವುದು SC ST ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಲ್ಲ. ಒಂದು ವೇಳೆ, ಜಾತಿಯನ್ನು ಹೀಯಾಳಿಸಲು ಅವಮಾನ ಮಾಡಿದ್ದರೆ ಆಗ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಶಾಸಕ ಪಿ.ವಿ. ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬ್ ಚಾನೆಲ್ ಮರುನಾಡನ್ ಮಲಯಾಳಿ ಸಂಪಾದಕ ಶಾಜನ್ ಸ್ಕಾರಿಯಾ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ನಿರ್ವಹಿಸುತ್ತಿದ್ದ ಕ್ರೀಡಾ ಹಾಸ್ಟೆಲ್‌ನ ದುರಾಡಳಿತದ ಕುರಿತು ಶಾಜನ್ ಸ್ಕಾರಿಯಾ ಅವರು ವೀಡಿಯೋ ಪೋಸ್ಟ್ ಮಾಡಿದ್ದರು. ಪಿ.ವಿ. ಶ್ರೀನಿಜಿನ್ ಅವರು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ.
ನಾನು ಪರಿಶಿಷ್ಟ ಜಾತಿಗೆ ಸೇರಿದ ಪುಲಯ ಸಮುದಾಯಕ್ಕೆ ಸೇರಿದ್ದೇನೆ. ಈ ವಿಷಯವನ್ನು ತಿಳಿದೂ ಸಾಮಾನ್ಯ ಜನರಲ್ಲಿ ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಉದ್ದೇಶದಿಂದ ಸ್ಕಾರಿಯಾ ಅವರು ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ ಎಂದು ಶಾಸಕ ಶ್ರೀನಿಜಿನ್ ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರನ್ನು ಅವಮಾನ ಮಾಡಿದಾಗ ಅದು ಜಾತಿ ಆಧಾರಿತ ಅವಮಾನದ ಭಾವನೆ ಉಂಟು ಮಾಡುವುದಿಲ್ಲ. ಒಂದು ವೇಳೆ, ಜಾತಿಯನ್ನು ಉದ್ದೇಶಿಸಿ ಮಾಡಿದ ಅವಮಾನವು ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಸಂತ್ರಸ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಕಾಯ್ದೆಯ ಸೆಕ್ಷನ್ 3(1)(r) ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲು ಸಾಕಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸ್ಕಾರಿಯಾ ಅವರು ಮಾಡಿದ ಪೋಸ್ಟ್‌ನಲ್ಲಿ ಇರುವ ವೀಡಿಯೋ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಅವಮಾನ ಮಾಡಲಾಗಿದೆ ಎಂದು ಪ್ರಾಥಮಿಕವಾಗಿ ಸೂಚಿಸಲು ಏನೂ ಇಲ್ಲ ಎಂದು ನ್ಯಾಯಪೀಠ ಗಮನಿಸಿತು. ವೀಡಿಯೋದಲ್ಲಿ ಮಾಡಲಾದ ಹಕ್ಕುಗಳ ಸತ್ಯತೆಯನ್ನು ನಿರ್ಣಯಿಸುವ ಅಗತ್ಯವಿಲ್ಲ ನ್ಯಾಯಾಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಜಾತಿ ಗುರುತಿನ ಕಾರಣದಿಂದ ಆ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಅವಮಾನಿಸುವ ಅಪರಾಧಗಳಿಗೆ ಶಿಕ್ಷೆಗೆ ಕಠಿಣ ನಿಬಂಧನೆಗಳನ್ನು ಒದಗಿಸುವುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.