-->
ಸೇವಾ ಸಂಬಂಧಿ ಪ್ರಕರಣ: ಎಲ್ಲ ಬಾಧಿತರೂ ಪಕ್ಷಕಾರರಾಗಬೇಕಿಲ್ಲ- ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಸೇವಾ ಸಂಬಂಧಿ ಪ್ರಕರಣ: ಎಲ್ಲ ಬಾಧಿತರೂ ಪಕ್ಷಕಾರರಾಗಬೇಕಿಲ್ಲ- ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಸೇವಾ ಸಂಬಂಧಿ ಪ್ರಕರಣ: ಎಲ್ಲ ಬಾಧಿತರೂ ಪಕ್ಷಕಾರರಾಗಬೇಕಿಲ್ಲ- ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು





ಸೇವಾ ಸಂಬಂಧಿತ ಪ್ರಕರಣಗಳಲ್ಲಿ ಎಲ್ಲ ಬಾಧಿತರನ್ನು ಪಕ್ಷಕಾರನ್ನಾಗಿ ಮಾಡಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ವಿಕ್ರಮ್ ನಾಥ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಸೇವಾ ಸಂಬಂಧಿತ ಪ್ರಕರಣಗಳಲ್ಲಿ ಕೆಲವು ಬಾಧಿತರನ್ನು ಪಕ್ಷಕಾರನ್ನಾಗಿ ಸೇರಿಸಿದರೆ ಸಾಕು. ಎಲ್ಲರನ್ನೂ ಸೇರ್ಪಡೆಗೊಳಿಸಬೇಕಾಗಿಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ.


"ಮುಕುಲ್ ಕುಮಾರ್ ತ್ಯಾಗಿ Vs ಉತ್ತರ ಪ್ರದೇಶ ಸರ್ಕಾರ" (2020 4 SCC 86) ಪ್ರಕರಣವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌, ಬಾಧಿತ ಪಕ್ಷಕಾರರ ಪಟ್ಟಿ ದೊಡ್ಡದಾಗಿದ್ದರೆ ಎಲ್ಲರನ್ನೂ ಪಕ್ಷಕಾರರನ್ನಾಗಿ ಸೇರಿಸುವುದು ಅನಗತ್ಯ ಮತ್ತು ಅಪ್ರಸ್ತುತ. ಪ್ರಾತಿನಿಧಿಕವಾಗಿ ಈ ಪೈಕಿ ಕೆಲವರನ್ನು ಪಕ್ಷಕಾರನ್ನಾಗಿ ಸೇರಿಸಿದರೆ ಸಾಕು. ಆ ಪ್ರಕರಣದ ತೀರ್ಪು ಎಲ್ಲರಿಗೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.



Impleading of few effected employees sufficient in service matters; Non Joining of all parties not fatal: Supreme Court



ಪ್ರಕರಣ: ಅಜಯ್ ಕುಮಾರ್ ಶುಕ್ಲಾ ಮತ್ತಿತರರು Vs ಅರವಿಂದ ರೈ ಮತ್ತಿತರರು

ಸುಪ್ರೀಂ ಕೋರ್ಟ್‌, CA 5966/2021, Dated 08-12-2021

Ads on article

Advertise in articles 1

advertising articles 2

Advertise under the article