ವಿಶೇಷ ಚೇತನ ಸರ್ಕಾರಿ ನೌಕರರಿಗೆ ವರ್ಗಾವಣೆಯಲ್ಲಿ ಇರುವ ಸ್ಪೆಷಲ್ ರಿಯಾಯಿತಿ ಏನು ಗೊತ್ತೇ..?
ವಿಶೇಷ ಚೇತನ ಸರ್ಕಾರಿ ನೌಕರರಿಗೆ ವರ್ಗಾವಣೆಯಲ್ಲಿ ಇರುವ ಸ್ಪೆಷಲ್ ರಿಯಾಯಿತಿ ಏನು ಗೊತ್ತೇ..?
ವಿಶೇಷ ಚೇತನ ಸರ್ಕಾರಿ ನೌಕರರಿಗೆ ವರ್ಗಾವಣೆಯಲ್ಲಿ ರಾಜ್ಯ ಸರ್ಕಾರ ವಿಶೇಷವಾದ ಕೆಲವು ರಿಯಾಯಿತಿಗಳನ್ನು ಅನುಸರಿಸುತ್ತಿದೆ. ಈ ಬಗ್ಗೆ ಈಗಾಗಲೇ ವಿಸ್ತೃತವಾದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಸರ್ಕಾರಿ ಸುತ್ತೋಲೆಯಲ್ಲೂ ಈ ಬಗ್ಗೆ ವಿವರ ನೀಡಲಾಗಿದೆ.
ಪ್ರಮುಖ ರಿಯಾಯಿತಿಗಳು:
ವಿಶೇಷ ಚೇತನ ಸರ್ಕಾರಿ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಲಾಗುವುದು.
ವಿಶೇಷ ಚೇತನರು ನೇಮಕಾತಿಗೆ ಆಯ್ಕೆಯಾದ ನಂತರದಲ್ಲಿ ನೀಡುವ ಪ್ರಾರಂಭಿಕ ಸ್ಥಳ ನಿಯುಕ್ತಿಯನ್ನು (Initial Posting) ಹಾಗೂ ಪದೋನ್ನತಿ ನಂತರದಲ್ಲಿ ಅವರ ವರ್ಗಾವಣೆ ಅಗತ್ಯವಾಗಿದ್ದರೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸುವುದು.
ಸರ್ಕಾರಿ ನೌಕರನ ಅವಲಂಬಿತ ಮಕ್ಕಳು, ಪತಿ/ಪತ್ನಿ, ತಂದೆ, ತಾಯಿ ಇವರುಗಳು ತೀವ್ರ ಅಂಗವೈಕಲ್ಯವನ್ನು ಹೊಂದಿದ್ದಲ್ಲಿ ಅಥವಾ ಸರ್ಕಾರಿ ನೌಕರನು ಅವರ ನಿರ್ವಹಣೆ ಹಾಗೂ ಪುನರ್‌ವಸತಿಯ ಜವಾಬ್ದಾರಿ ಹೊತ್ತು ಅಂಗವಿಕಲರ ಹಕ್ಕುಗಳನ್ನು ಸಂರಕ್ಷಣೆ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದ್ದಲ್ಲಿ ಅಂತಹ ನೌಕರರಿಗೆ ಸಂಬಂಧಿಸುವ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿಗೆ ಒಳಪಟ್ಟು ಅಂತಹ ದಾಖಲೆಗಳನ್ನು ಪರಿಶೀಲಿಸಿ, ನಿಯತಕಾಲಿಕೆ ವರ್ಗಾವಣೆಯಿಂದ ವಿನಾಯಿತಿ ಪಡೆಯಬಹುದು ಮತ್ತು ಇಂತಹ ನೌಕರರಿಗೆ ಸಾಧ್ಯವಾದ್ಟು ಹತ್ತಿರದ ಸ್ಥಳಕ್ಕೆ ಸ್ಥಳ ನಿಯೋಜಿಸಬೇಕು.
ಸೇವ ನಿರತ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಅಂಗವೈಕಲ್ಯ ಅನುಭವಿಸಿದ್ದರೆ, ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣಕರ್ತರನ್ನುಹಾಜರುಡಿಸುವ ಷರತ್ತಿಗೆಒಳಪಟ್ಟು ಅವರನ್ನು ತಾವು ಬಯಸಿದ ಹತ್ತಿರದ ಸ್ಥಳಕ್ಕೆ ವರ್ಗಾಯಿಸಲಾಗುವುದು.
ಸಾರ್ವತ್ರಿಕ ವರ್ಗಾವಣೆಯ ಅವಧಿಯಲ್ಲಿ ಅಂಗವಿಕಲ ನೌಕರರಿಗೆ ತೊಂದರೆಯಾಗದಂತೆ ಎಲ್ಲ ಸಕ್ಷಮ ಪ್ರಾಧಿಕಾರದ ಎಚ್ಚರಿಕೆಯನ್ನು ವಹಿಸಬೇಕು ಎಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು ದಿನಾಂಕ 12-06-2024ರಂದು ಹೊರಡಿಸಿದ ಸುತ್ತೋಲೆಯಲ್ಲಿ ವಿವರ ಮಾಡಲಾಗಿದೆ..