-->
ಎಚ್ಚರಿಕೆ! ಸರ್ಕಾರಿ ನೌಕರರು BPL ಕಾರ್ಡ್ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ

ಎಚ್ಚರಿಕೆ! ಸರ್ಕಾರಿ ನೌಕರರು BPL ಕಾರ್ಡ್ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ

ಎಚ್ಚರಿಕೆ! ಸರ್ಕಾರಿ ನೌಕರರು BPL ಕಾರ್ಡ್ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ





ಸರ್ಕಾರಿ ಉದ್ಯೋಗಿಯಾಗಿದ್ದು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುವ ಬಿಪಿಎಲ್ ಕಾರ್ಡ್‌ ಹೊಂದಿದ್ದವರಿಗೆ ಕಹಿ ಸುದ್ದಿ. ಒಂದು ವೇಳೆ, ಸರ್ಕಾರಿ ಉದ್ಯೋಗದಲ್ಲಿದ್ದು, BPL ಕಾರ್ಡ್ ಹೊಂದಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ.


BPL ಕಾರ್ಡ್ ಬಗ್ಗೆ ಸರ್ಕಾರಕ್ಕೆ ಮಾಹಿತಿ ಗೊತ್ತಾದರೆ, ತಕ್ಷಣವೇ ಕಾರ್ಡ್ ಮುಟ್ಟುಗೋಲು ಹಾಕುವ ಜೊತೆಗೆ ದುಬಾರಿ ದಂಡ ಬೀಳುವ ಸಾಧ್ಯತೆ ಇದೆ.


ರಾಜ್ಯಾದ್ಯಂತ ಅನರ್ಹ BPL ಕಾರ್ಡ್‌ದಾರರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸರ್ಕಾರಿ ನೌಕರರೂ ಈ ಪಟ್ಟಿಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರಂಭಿಕ ಹಂತದಲ್ಲಿ ಸರ್ಕಾರಿ ನೌಕರರ BPL ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.


HRMS ಮತ್ತು KGID ಜೊತೆಗೆ ಜೋಡಣೆಯಾಗಿರುವ BPL ಕಾರ್ಡ್‌ಗಳ ಪಟ್ಟಿಯನ್ನು ಈಗಾಗಲೇ ಇಲಾಖೆಯ ಕೇಂದ್ರ ಕಚೇರಿಯಿಂದ ಸಿದ್ದಪಡಿಸಿ ಆಯಾ ಜಿಲ್ಲೆಗಳಿಗೆ ನೀಡಲಾಗಿದೆ. ಅದರಂತೆ ರಾಜ್ಯದ 4272 ಸರ್ಕಾರಿ ನೌಕರರು BPL ಕಾರ್ಡ್ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಸರ್ಕಾರಿ ನೌಕರರಾಗಿ ಸೇವೆ ಸೇರಿದ ದಿನದಿಂದ ಈವರೆಗೂ BPL ಕಾರ್ಡ್‌ಗೆ ಸಿಗುವ ಸೌಲಭ್ಯ, ಪಡಿತರ ಇತ್ಯಾದಿ ತೆಗೆದುಕೊಂಡಿದ್ದರೆ ಮಾರುಕಟ್ಟೆಯ ದರದಂತೆ ಅದಕ್ಕೆ ಸೂಕ್ತ ದಂಡ ಪಾವತಿಸಬೇಕಾಗುತ್ತದೆ. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಂಬಂಧಪಟ್ಟ ನೌಕರರಿಗೆ ನೋಟೀಸ್ ಜಾರಿ ಮಾಡಿ ಆ ನಂತರ ವಸೂಲಿ ಪ್ರಕ್ರಿಯೆ ನಡೆಯಲಿದೆ. ಬಿಪಿಎಲ್ ಕಾರ್ಡ್ ನೀಡಿ ಸರ್ಕಾರಿ ಸೌಲಭ್ಯ ಪಡೆದಿದ್ದರೆ ಅದಕ್ಕೂ ಕುತ್ತು ಬರಲಿದೆ.


ಪ್ರತಿ ಜಿಲ್ಲೆಯಲ್ಲೂ ಅನರ್ಹ BPL ಕಾರ್ಡ್ ಹೊಂದಿದವರ ಪಟ್ಟಿಯನ್ನು ಮರು ಪಟ್ಟಿ ಮಾಡಲಾಗುತ್ತಿದೆ. ಇದನ್ನು ಸರ್ಕಾರಿ ನೌಕರರ ಹೆಸರಿನೊಂದಿಗೆ ತಾಳೆ ಹಾಕಿ, ತಕ್ಷಣಕ್ಕೆ ಕಾರ್ಡನ್ನು ಮುಟ್ಟುಗೋಲು ಹಾಕಲಾಗುತ್ತದೆ. ಇದರ ನಂತರದಲ್ಲಿ ಅವರಿಂದ ಸರ್ಕಾರಿ ಸೌಲಭ್ಯ ಮತ್ತು ಸೇವೆಯನ್ನು ದುರುಪಯೋಗಪಡಿಸಿಕೊಂಡ ನೆಲೆಯಲ್ಲಿ ಮಾರುಕಟ್ಟೆ ದರದಲ್ಲಿ ದಂಡ ಸಹಿತ ವಸೂಲಿ ಮಾಡಲಾಗುತ್ತದೆ.



Ads on article

Advertise in articles 1

advertising articles 2

Advertise under the article