ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ಅಧಿಕೃತ ಕೋರ್ಟ್ ಭಾಷೆ ಇಂಗ್ಲಿಷ್- ವಕೀಲರಿಗೆ ನೆನಪಿಸಿದ ಸುಪ್ರೀಂ ಕೋರ್ಟ್
ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ಅಧಿಕೃತ ಕೋರ್ಟ್ ಭಾಷೆ ಇಂಗ್ಲಿಷ್- ವಕೀಲರಿಗೆ ನೆನಪಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದ ಮುಂದೆ ಪಾರ್ಟಿ ಇನ್ ಪರ್ಸನ್ ಆಗಿ ಹಾಜರಾದ ವಕೀಲರೊಬ್ಬರು ಹಿಂದಿಯಲ್ಲಿ ವಾದ ಮಂಡಿಸಿದರು. ವಾದ ಮುಗಿಸಿದ ನಂತರ ವಕೀಲರಿಗೆ ಕೋರ್ಟ್‌ನ ಅಧಿಕೃತ ಭಾಷೆ ಇಂಗ್ಲಿಷ್ ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಮೌಖಿಕವಾಗಿ ನೆನಪಿಸಿತು.
ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಎಸ್.ವಿ.ಎನ್. ಭಟ್ಟಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಈ ಘಟನೆ ನಡೆಯಿತು.
ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕೋರ್ಟ್ ಭಾಷೆ ಇಂಗ್ಲಿಷ್ ಎಂಬುದನ್ನು ವಕೀಲರಿಗೆ ನೆನಪಿಸಿದ ಸುಪ್ರೀಂ ಕೋರ್ಟ್, ಮೊದಲು ನೀವು ಮಂಡಿಸಿದ ವಾದವನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿ ಹೇಳಿತು.
ನೀವು ಪಾರ್ಟಿ ಇನ್ ಪರ್ಸನ್ ಆಗಿ ವಾದ ಮಾಡಲು ಬಂದಿದ್ದೀರಿ. ಆದ್ದರಿಂದ ನಿಮ್ಮನ್ನು ಮಧ್ಯದಲ್ಲಿ ನಿಲ್ಲಿಸಿಲ್ಲ. ನೀವು ಏನನ್ನು ಹೇಳಲು ಬಯಸಿದ್ದೀರಿ ಎಂಬುದನ್ನು ಹೇಳಿದ್ದೀರಿ. ಆದರೆ, ನ್ಯಾಯಾಲಯದಲ್ಲಿ ವಿಚಾರಣೆಗಳು ಇಂಗ್ಲಿಷ್‌ನಲ್ಲಿ ಇವೆ ಎಂದು ಕಕ್ಷಿದಾರರಿಗೆ ನ್ಯಾಯಪೀಠ ಮೌಖಿಕವಾಗಿ ಹೇಳಿತು.
ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಪತ್ನಿಯ ಕೋರಿಕೆ ಮೇರೆಗೆ ಕೇಸನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದು, ಇದರ ವಿಚಾರಣೆಯಲ್ಲಿ ಅವರು ಪಾರ್ಟಿ ಇನ್ ಪರ್ಸನ್ ಆಗಿ ಪೀಠದೆದುರು ಹಾಜರಾಗಿದ್ದರು.