-->
ನ್ಯಾಯಾಧೀಶರ ವಿರುದ್ಧವೇ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಪೊಲೀಸ್ ಆಯುಕ್ತರು

ನ್ಯಾಯಾಧೀಶರ ವಿರುದ್ಧವೇ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಪೊಲೀಸ್ ಆಯುಕ್ತರು

ನ್ಯಾಯಾಧೀಶರ ವಿರುದ್ಧವೇ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಪೊಲೀಸ್ ಆಯುಕ್ತರು






ನ್ಯಾಯಾಂಗ ಆದೇಶದಲ್ಲಿ ತಮ್ಮ ವಿರುದ್ಧ ವ್ಯತಿರಿಕ್ತ ಹೇಳಿಕೆ ಮತ್ತು ಆದೇಶ ಹೊರಡಿಸಿ ಕಾರಣಕ್ಕೆ ನಿವೃತ್ತ ಪೊಲೀಸ್ ಕಮಿಷನರ್ ವೊಬ್ಬರು ನ್ಯಾಯಾಧೀಶರ ವಿರುದ್ಧವೇ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.


ಗುರುಗ್ರಾಮದ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ. ಮತ್ತು ಪ್ರಕರಣ ದಾಖಲಾದ ದಿನ ಈ ಪ್ರಕರಣದ ವಿಚಾರಣೆಯೂ ನಡೆಯಿತು. ಗುರುಗ್ರಾಮ್‌ನ ಪೊಲೀಸ್ ಕಮಿಷನರ್ ಆಗಿದ್ದ ಭಾರತೀಯ ಪೊಲೀಸ್ ಸೇವೆ (ಐ ಪಿ ಎಸ್)ನ ಹಿರಿಯ ಅಧಿಕಾರಿಯಾಗಿರುವ ಕೃಷ್ಣ ಕುಮಾರ್ ಈ ಪ್ರಕರಣ ದಾಖಲಿಸಿದ್ದಾರೆ.


ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅಮಿತ್ ಸೆಹರಾವತ್ ಫೆಬ್ರವರಿ 2022ರಲ್ಲಿ ಆಕ್ಷೇಪಿತ ಆದೇಶವನ್ನು ಹೊರಡಿಸಿದ್ದರು. ಈ ಆದೇಶದಲ್ಲಿ ಬಹುಕೋಟಿ ಮೊತ್ತದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗ್ರಾಮ್‌ನ ಮಾಜಿ ಪೊಲೀಸ್ ಉಪ ಕಮಿಷನರ್ ಧೀರಜ್ ಸೇಠಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಪ್ರಕರಣ ಕಣ್ಣಿಗೆ ಕಾಣುವುದಕ್ಕಿಂತ ನಿಗೂಢವಾಗಿದೆ ಎಂದು ಟಿಪ್ಪಣಿ ಮಾಡಿದ್ದರು.


ಪ್ರಕರಣದ ಪ್ರಮುಖ ಶಂಕಿತ ಡಾ. ಸಚೀಂದರ್ ಜೈನ್ ನೇವಲ್ ಎಂಬವರು ನೀಡಿದ ತಪ್ಪೊಪ್ಪಿಗೆಯನ್ನು ಆಧರಿಸಿ, ಪ್ರಕರಣದ ತನಿಖೆಯನ್ನು ಹಳಿ ತಪ್ಪಿಸಲು ಲಂಚ ಪಡೆದ ಆರೋಪ ಹೊತ್ತಿರುವ ಸೇಠಿಯಾ ರಾವ್ ಅವರ ನೇತೃತ್ವದಲ್ಲಿ ಈ ರೀತಿ ಮಾಡಿರುವುದು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದರು.





ಹಿಂದಿನ ಪೊಲೀಸ್ ಕಮಿಷನರ್ ಅವರ ಒಪ್ಪಿಗೆಯೊಂದಿಗೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಶಂಕಿತನು ಬಂಧನವಿಲ್ಲದೆ ನಡೆಸಲಾಗಿದೆಯೇ ಎಂದು ತನಿಖಾಧಿಕಾರಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.


ಇದನ್ನು ಆಕ್ಷೇಪಿಸಿದ ಮಾಜಿ ಪೊಲೀಸ್ ಅಧಿಕಾರಿ ಕೃಷ್ಣ ಕುಮಾರ್ ರಾವ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನ್ಯಾಯಾಧೀಶರ ಹೇಳಿಕೆಗಳು ಮತ್ತು ಮಾಡಿದ ಆದೇಶವು ಊಹೆಯ ಆಧಾರದ ಮೇಲೆ ಮಾಡಲಾಗಿದೆ. ಮತ್ತು ಈ ಆದೇಶಕ್ಕೆ ಯಾವುದೇ ನ್ಯಾಯಾಂಗ ಆಧಾರವನ್ನು ಹೊಂದಿಲ್ಲ. ಘಟನೆಗಳ ಬಗ್ಗೆ ನ್ಯಾಯಾಧೀಶರಿಗೆ ಯಾವುದೇ ಸ್ಪಷ್ಟ ಹಾಗೂ ನಿಖರ ಮಾಹಿತಿ ಇಲ್ಲದಿದ್ದರೂ ಈ ರೀತಿಯ ಆದೇಶ ಹೊರಡಿಸಿರುವುದು ತಮ್ಮ ಘನತೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎಂದು ಅವರು ವಾದಿಸಿದ್ದರು.


ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 21ಕ್ಕೆ ನಡೆಯಲಿದ್ದು, ಪ್ರಕರಣ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.






Ads on article

Advertise in articles 1

advertising articles 2

Advertise under the article